ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧೀರ್ ರೈ ಮೇನಾಲ ಅತ್ಮ ಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಎರಡು ದಿವಸ ಹಿಂದೆ ಅವರು ಅಜ್ಜಾವರ ಮಂಡೆಕೋಲು ತೆರಳುವ ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಎಂಬಲ್ಲಿಗೆ ತೆರಳಿ ಸೊಳ್ಳೆಗೆ ಹೊಡೆಯುವ ಕೀಟನಾಶಕ ಸೇವಿಸಿದ್ದರು ಮತ್ತು ಮನೆಯ ಅಂಗಳ ತಲುಪುತ್ತಿದ್ದಂತೆ ಅವರು ವಾಂತಿಮಾಡುವಾಗ ವಿಷಸೇವಿಸಿದ ವಿಚಾರ ಬಹಿರಂಗವಾಗಿದ್ದು ಕೂಡಲೇ ಖಾಸಗಿ ಆಸ್ಪತ್ರೆಗೆ
ಕರೆತಂದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ್ಮಹತ್ಯೆಗೆ ಅರ್ಥಿಕ ಸಮಸ್ಯಯೆ ಕಾರಣ ಎಂದು ಹೇಳಗಾಗುತ್ತಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ





















































