ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕೆರೆಮೂಲೆ ದಿ.ಕೃಷ್ಣ ಕೇಕುಣ್ಣಾಯ ರವರ ಪುತ್ರ ಸುಳ್ಯ ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು. ಅವರಿಗೆ 52 ವರ್ಷ ಪ್ರಾಯವಾಗಿತ್ತು.
ಮೃತರು ಕೆಲ ಸಮಯಗಳಿಂದ ಕರುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ ಸತ್ಯಭಾಮೆ, ಪತ್ನಿ ಶೋಭಾ, ಪುತ್ರ ಮಾ| ಆದಿತ್ಯ, ಪುತ್ರಿಯರಾದ ಶ್ವೇತಾ,ನಂದಿತಾ ಇತರರನ್ನು ಅಗಲಿದ್ದಾರೆ.