ಚಿಕ್ಕಿ ತಿಂದ 46 ವಿದ್ಯಾರ್ಥಿಗಳು ಅಸ್ವಸ್ಥ..!





















































































ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಎಂಬಲ್ಲಿ ಶಾಲೆಯಲ್ಲಿ ಶೇಂಗಾ ಚಿಕ್ಕಿ ತಿಂದು ಸುಮಾರು 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ಮಧ್ಯಾಹ್ನ ಬಿಸಿ ಊಟದ ವೇಳೆ ಚಿಕ್ಕಿ ನೀಡಲಾಗಿತ್ತು.ಪರಿಣಾಮವಾಗಿ 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾ‌ರ್ ವರದರಾಜು, ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top