ಸಿರಿಕುರಲ್ : ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಜರುಗಿತು.
ಬೆಳಗ್ಗೆ ಸ್ಥಳ ಶುದ್ಧಿಯಾಗಿ ಗಣಪತಿಹವನ,ವನದುರ್ಗಾ ಹೋಮ ಆಶ್ಲೇಷ ಬಲಿ ತಂಬಿಲ ಸೇವೆಯು ಅರ್ಚಕರಾದ ಜಯರಾಮ ಬಳ್ಳುಳ್ಳಾಯ, ಸುಬ್ರಹ್ಮಣ್ಯ ಪಾಂಗಣ್ಣಾಯ, ರಮೇಶ ಮೂಡಿತ್ತಾಯ, ಕ್ಷೇತ್ರ ಪುರೋಹಿತರಾದ ವೇ.ಮೂ.ಅಭಿರಾಮ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಭಕ್ತರಿಂದ ಹರಕೆಯ ದೀಪ ಹಾಗೂ ಇನ್ನಿತರ ವಸ್ತು ರೂಪದ ಕಾಣಿಕೆಯನ್ನು ದೇವರಿಗೆ ಸಮರ್ಪಿಸಲಾಯಿತು.
ಬೆಳಗ್ಗೆ ವಿವಿಧ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಗೋಕುಲ್ ದಾಸ್ ಸುಳ್ಯ, ಸಂಚಾಲಕ ಅಶೋಕ ಪೀಚೆ ಮನೆ, ಉಪಾಧ್ಯಕ್ಷ ಅರವಿಂದ ಕರಕರನ,ಜತೆಕಾರ್ಯದರ್ಶಿ ವೆಂಕಟೇಶ ಕರ್ಪೆ, ಕೋಶಾಧಿಕಾರಿ ಬೆಳ್ಯಪ್ಪ ಗೌಡ ಐವರ್ನಾಡು,ದೇವಿಯ ಪರಿಚಾರಕರಾದ ಜನಾರ್ದನ ಚೊಕ್ಕಾಡಿ, ದೈವದ ಪೂಜಾರಿ ರಾಮ ನಾಯ್ಕ ಕಚ್ಚೆರ್ಪೆ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



































































































Leave a Comment

Your email address will not be published. Required fields are marked *

error: Content is protected !!
Scroll to Top