ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಇದರ ಸಹಯೋಗದಿಂದ 17ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಈ ದಿನ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಸಭಾಂಗಣದಲ್ಲಿ ನಡೆಯಿತು. ಶ್ರೀ ಸತ್ಯನಾರಾಯಣ ಪೂಜೆಗೆ 105 ವೃತದಾರಿಗಳು ಇದ್ದು 620 ಸತ್ಯನಾರಾಯಣ ಪೂಜಾ ಸೇವೆ ಆಗಿರುತ್ತದೆ. ಈ ಪೂಜಾ ಧಾರ್ಮಿಕ ಸಭಾ ಕಾರ್ಯಕ್ರಮವು ಭಕ್ತಾದಿಗಳಿಗೆ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮವನ್ನು ತಾಲೂಕಿನ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಇವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಸ್ ಎನ್ ಮನ್ಮಥ ಇವರ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು ಶ್ರೀ. ಕ್ಷೆ.ಧ.ಗ್ರಾ. ಯೋಜನೆ ದ.ಕ. ಜಿಲ್ಲೆ. ಶ್ರೀಮತಿ ಲೀಲಾವತಿ ಕುತ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಐವರ್ನಾಡು. ಶ್ರೀ ರಾಜೇಶ್ ಭಟ್ ಬಾಂಜಿಕೋಡಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು. ಶ್ರೀ ಶ್ರೀನಿವಾಸ್ ಮಾಡ್ತಿಲ ಮಾಜಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು. ಶ್ರೀಮತಿ ವೇದ ಹೆಚ್ ಶೆಟ್ಟಿ. ಕೊರಗಪ್ಪ ಗೌಡ ಪೂಜಾರಿ ಮನೆ. ಶ್ರೀ ದಿನೇಶ್ ಮಡ್ತಿಲ. ಮಾಧವ ಗೌಡ ಯೋಜನೆ ಅಧಿಕಾರಿ ಶ್ರೀ. ಕ್ಷೆ. ಧ.ಗ್ರಾ.ಯೋಜನೆ ಸುಳ್ಯ ತಾಲೂಕು. ವಲಯದ ಎಲ್ಲಾ ಒಕ್ಕೂಟ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸೇವಾದಾರರು, ಶೌರ್ಯ ವಿಪತ್ತು ಘಟಕ ಬೆಳ್ಳಾರೆ ವಲಯ, ಸಂಘದ ಎಲ್ಲಾ ಸದಸ್ಯರು ಒಟ್ಟಾಗಿ 750 ಮಂದಿ ಭಾಗವಹಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ವೇದ ಹೆಚ್ ಶೆಟ್ಟಿ ಸ್ವಾಗತಿಸಿದರು ದಾಮೋದರ್ ಕೊಡ್ತಿಲು ವಂದಾನಾರ್ಪಣೆ ಮಾಡಿದರು ತದನಂತರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ 10 ಮಂದಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು ಯೋಜನೆಯಿಂದ ದೊರಕುವ ಜನಮಂಗಳ ಕಾರ್ಯಕ್ರಮದಲ್ಲಿ ನೀಡುವ ವಾಟರ್ ಬೆಡ್, ಯು ಶೇಪ್ ವಾಕರ್, ವೀಲ್ ಚಯರ್, ಕ್ಷೇತ್ರದಿಂದ ಸಹಾಯಧನ ಮಂಜೂರಾದ ಕ್ರಿಟಿಕಲ್ ಫಂಡ್, ಪಿ ಆರ್ ಕೆ ಸೌಲಭ್ಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಗ್ರಾಮದ ಸಾಧಕರಾದ ಪ್ರವೀಣ್ ಪವಿತ್ರ ಮಜಲು ಮತ್ತು ಎಸ್ ಎನ್ ಮನ್ಮಥ ಇವರನ್ನು ಗೌರವಿಸಲಾಯಿತು.
ಐವರ್ನಾಡು : 17ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ





















































