ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಭತ್ತ ಸಾಗುವಳಿಗೆ ಡಾ.ದೇವಿಪ್ರಸಾದ್ ಕಾನತ್ತೂರು ಅವರಿಂದ ಚಾಲನೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಾಲ್ಕನೇ ವರ್ಷದ ಭತ್ತದ ಸಾಗುವಳಿ ಜೂ.5 ರಂದು ನಡೆಸಲಾಯಿತು.
ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬದ ಸ್ಮರಣೆಗೋಸ್ಕರ ದಾನಿಗಳ ಸಹಾಯದಿಂದ ನಿರ್ಮಿತಗೊಂಡ ದೇವಳದ ಗದ್ದೆಯಲ್ಲಿ ನಾಲ್ಕನೇ ವರ್ಷದ ಭತ್ತದ ಸಾಗುವಳಿ ಮಾಡಲಾಯಿತು.
ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಕಾರ್ಯಕ್ರಮವನ್ನು ಭತ್ತ ಸಾಗುವಳಿ ಮಾಡುವುದರ ಮೂಲಕ ಉದ್ಘಾಟಿಸಿದರು. ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಗೌಡ ಕುದ್ವ, ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ ಎಣ್ಣೂರು, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಮರಕ್ಕಡ, ಶ್ರೀಮತಿ ಮಾಲಿನಿ ಕುದ್ದ, ವ್ಯವಸ್ಥಾಪನಾ ಸಮಿತಿಯ ಗೌರವ ಸಲಹೆಗಾರರಾಗಿರುವ ಪರಮೇಶ್ವರ ಗೌಡ ಬಿಳಿಮಲೆ, ಸಾರ್ವಜನಿಕ ಆರಾಧನಾ ಸಮಿತಿಯ ಖಜಾಂಜಿ ಆನಂದ ಜಳಕದ ಹೊಳೆ,
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣಕೆರೆಮೂಲೆ, ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಜೇಸಿಐ ಪಂಜ ಪಂಚಶ್ರೀ ರಜತ ವರ್ಷದ ಅಧ್ಯಕ್ಷ ಶಿವಪ್ರಸಾದ್‌ ಹಾಲೆಮಜಲು, ಮಾರ್ಗದರ್ಶಕರು ಹಾಗೂ ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ, ಘಟಕದ ಪೂರ್ವಾಧ್ಯಕ್ಷರಾದ ನಾಗಮಣಿ ಕೆದಿಲ, ಸುದರ್ಶನ ಪಟ್ಟಾಜೆ, ಉಪಾಧ್ಯಕ್ಷ ದೇವಿಪ್ರಸಾದ್‌ ಚಿಕ್ಕುಳಿ, ಸದಸ್ಯರಾದ ಗಗನ್ ಕಿನ್ನಿಕುಮೇರಿ, ಷಣ್ಮುಖ ಕಟ್ಟ, ಕೃಷಿ ಇಲಾಖೆ ಕರ್ನಾಟಕ ಸರಕಾರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ನಿಂತಿಕಲ್ಲು ಇದರ ವ್ಯವಸ್ಥಾಪಕ ಬಾಲಕೃಷ್ಣ, ದೇವಳದ ಸಿಬ್ಬಂದಿ ಕೃಷ್ಣಪ್ಪ ಜಳಕದ ಹೊಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು.



































































































Leave a Comment

Your email address will not be published. Required fields are marked *

error: Content is protected !!
Scroll to Top