ಮರಿ ಆನೆ ಮೃತಪಟ್ಟು ಕೆಲವು ದಿನಗಳು ಕಳೆದರೂ ತಾಯಿ ಆನೆ ಮರಿಯ ಕಳೆಬರಹವನ್ನು ತಾನು ಹೋದ ಕಡೆಯಲ್ಲೆಲ್ಲ ಎತ್ತಿಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ದೃಶ್ಯ ಹಾಸನದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕನನಳ್ಳಿ ಎಸ್ಟೇಟ್ ಬಳಿ ಕಂಡು ಬಂದಿದೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮರಿ ಸತ್ತು ಹೋಗಿದೆ ಎನ್ನುವುದು ತಿಳಿಯದೇ ಆನೆ ತಾನು ಹೋದಲ್ಲೆಲ್ಲ ಹೊತ್ತುಕೊಂಡು ಹೋಗುತ್ತಿದೆ. ಅಲ್ಲದೇ ಕಾಲಿನಿಂದ ಒದ್ದು ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಹೃದಯ ಹಿಂಡುವಂತಿದೆ.
ಶನಿವಾರ ಈ ಗರ್ಭಿಣಿ ಆನೆ ಮರಿಗೆ ಜನ್ಮ ನೀಡಿದೆ. ಆದರೆ ಮರಿ ಹುಟ್ಟುವ ಮೊದಲೇ ಸಾವನ್ನಪ್ಪಿತ್ತು ಎನ್ನಲಾಗಿದೆ. ಮರಿ ಸತ್ತಿದ್ದರೂ ತಾಯಿ ಆನೆ ಮರಿಯನ್ನು ಎಳೆದುಕೊಂಡು ತನ್ನೊಂದಿಗೆ ಸಾಗುತ್ತಿದೆ.
ತಾಯಿ ಆನೆಯ ಭಾವನಾತ್ಮಕ ಸಂದರ್ಭವನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸತ್ತ ಮರಿಯಾನೆಯ ಮ್ರತದೇಹವನ್ನು ಎತ್ತಿಕೊಂಡು ತಿರುಗಾಡುತ್ತಿರುವ ತಾಯಿ ಆನೆ
