ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ವರದಿಯಾಗಿದೆ.
ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುವ ವೇಳೆ ಪೆಟ್ರೋಲ್ ಪಂಪ್ ತಿರುವಿನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ಪಿಕಪ್ ವಾಹನದಲ್ಲಿರುವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದು
ದೇವರಗುಂಡ ಪ್ರಸಾದ್ ಅವರ ಪಿಕಪ್ ಎಂದು ತಿಳಿದುಬಂದಿದೆ.
ಸಂಪಾಜೆ : ಚರಂಡಿಗೆ ಬಿದ್ದ ಪಿಕಪ್

















