ಮನೆಯಂಗಳದಲ್ಲಿ ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವೃದ್ಧೆ ಯೊಬ್ಬರು ಮೃತಪಟ್ಟ ಘಟನೆ ಸೊಮವಾರ ವರದಿಯಾಗಿದೆ.
ಜಾಲ್ಲೂರು ಗ್ರಾಮದ ಕಾಟೂರು ನಿವಾಸಿ ದಿ. ತಿಮ್ಮಪ್ಪ ಗೌಡರ ಪತ್ನಿ ಕಮಲ ಮೃತಪಟ್ಟವರು.
ತೋಟದಿಂದ ಹುಲ್ಲು ಹೊತ್ತುಕೊಂಡು ಬರುವಾಗ ಈ ದುರ್ಘಟನೆ ನಡೆದಿದೆ.
ತಲೆಗೆ ಏಟಾಗಿದ್ದು ಅವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ..
ಕಾಲು ಜಾರಿ ಬಿದ್ದು ಮಹಿಳೆ ಸಾವು

















