ಸುಳ್ಯ : ಭಜನಾ ಕಮ್ಮಟ ಪೂರ್ವಭಾವಿ ಸಭೆ

ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಶ್ರೀ ಸೋಮಶೇಖರ ಪೈಕ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನ ಕಚೇರಿಯ ಸಭಾಂಗದಲ್ಲಿ ನಡೆಯಿತು.
ರಾಜ್ಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಜನಾ ಕಾರ್ಯಕ್ರಮ ಕೇವಲ ಮನೆಯಲ್ಲಿ ಅಲ್ಲ ಇಡೀ ಸಮಾಜದಲ್ಲಿ ಆಗಬೇಕು, ಮನುಷ್ಯನಿಗೆ ಆರೋಗ್ಯ ಮತ್ತು ನೆಮ್ಮದಿ ಬೇಕು ಅಂದರೆ ಭಗವಂತನ ನಾಮಸ್ಮರಣೆ ಮಾಡಬೇಕು, ಭಜನೆಯಿಂದ ಆರೋಗ್ಯ ಮತ್ತು ನೆಮ್ಮದಿಯನ್ನು ಖಂಡಿತವಾಗಿಯೂ ಪಡೆದುಕೊಳ್ಳಬಹುದು, ಕಲಿಯುಗದಲ್ಲಿ ದೇವರನ್ನೊಳಿಸಿಕೊಳ್ಳಲು ಭಜನೆ ಸುಲಭ ದಾರಿ ಎಂದು ಹೇಳುತ್ತಾ ಭಜನ ಸಂಸ್ಕಾರ ಉಳಿಯ ಬೇಕು ಎಂಬುವುದು ಪೂಜ್ಯರ ಆಶಯವು ಕೂಡ ಆಗಿದೆ ಎಂದು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಂತರ ತಾಲೂಕು ಹಾಗೂ ವಲಯದ ನಿಕಟ ಪೂರ್ವ ಪದಾಧಿಕಾರಿಗಳಿಂದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು.
ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ತಿನ ಧ್ಯೆಯೋದ್ದೇಶಗಳು ಮತ್ತು ಸುಳ್ಯ ತಾಲೂಕು ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನೀಡಿದರು.
ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆಮರಡ್ಕ ಮಾತನಾಡಿ ಭಜನಾ ಪರಿಷತ್ ಶ್ರೀ ಕ್ಷೇತ್ರದಿಂದ ಪ್ರಾರಂಭಗೊಂಡು ಒಂದು ಸುಂದರ ರೂಪರೇಷೆಗಳನ್ನು ಒಳಗೊಂಡಿದೆ, ಎಲ್ಲಾ ವಲಯಗಳಲ್ಲಿ ಭಜನೆಯ ಕುರಿತು ಜಾಗೃತಿ ಮೂಡಿಸಬೇಕು ಈ ಮುಖಾಂತರ ಪ್ರಸ್ತುತ ಕ್ಷೇತ್ರದ ಮೇಲೆ ಇರುವ ಆಪಾದನೆ, ದೂರ ಮಾಡಲು ನಾವೆಲ್ಲರೂ
ಒಂದಾಗಬೇಕು, ಪೂಜ್ಯರು ಜನಸೇವೆಯ ಮೂಲಕ ಎರಡನೇ ಸರ್ಕಾರವಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂಬುದಾಗಿ ತಿಳಿಸಿದರು.
ಶ್ರೀಮತಿ ಕುಸುಮ ಬಾಳುಗೋಡು ರವರು ಪ್ರಾರ್ಥನೆ ಮಾಡಿದರು.
ವೇದಿಯಲ್ಲಿ ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಯತೀಶ್ ರೈ ದುಗ್ಗಲಡ್ಕ
,ಉಪಾಧ್ಯಕ್ಷರಾದ ಶ್ರೀ ನಾರಾಯಣ ಕೊಡ್ತುಗುಳಿ, ತಾಲೂಕು ಕಾರ್ಯದರ್ಶಿಗಳಾದ ಸತೀಶ್ ಟಿ ಎನ್, ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಮಂಡೆಕೋಲು, ತಾಲೂಕು ಕೋಶಾಧಿಕಾರಿಗಳಾದ ಶ್ರೀ ನಾರಾಯಣ ಕಳಂಜ, ತಾಲೂಕು, ಉಪಸ್ಥಿತರಿದ್ದರು.ಯೋಜನಾಧಿಕಾರಿಯವರಾದ ಮಾಧವ ಗೌಡ ರವರು ಸ್ವಾಗತಿಸಿ,
ಗೌರವಾಧ್ಯಕ್ಷರಾದ ಶ್ರೀ ಯತೀಶ್ ರೈ ದುಗಲಡ್ಕರವರು ಸರ್ವರಿಗೂ ಧನ್ಯವಾದವಿತ್ತರು.
ಭಜನಾ ಪರಿಷತ್ತಿನ ಸಮನ್ವಯ ಅಧಿಕಾರಿಯವರಾದ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top