ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಸಕಲೇಶಪುರದ ಮಾರನಹಳ್ಳಿಯಿಂದ ಅಲ್ಲಲ್ಲಿ ಗುಡ್ಡೆ ಕುಸಿತವಾಗಿದ್ದು, ರಸ್ತೆಗಳಿಗೆ ಮರಗಳು ಉರುಳಿವೆ ಎಂದು ಹೇಳಲಾಗಿದೆ. ಶಿರಾಡಿಘಾಟ್ ನ ಗಡಿ ಚಾಮುಂಡೇಶ್ವರಿ ದೇವಾಲಯದವರೆಗೂ ನೀರು ಬಂದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ ಎಂದು ತಿಳಿದುಬಂದಿದೆ.
ಮಾರನಹಳ್ಳಿಯಿಂದ ಗುಂಡ್ಯದವರೆಗೆ ಘಾಟ್ ರಸ್ತೆಯಲ್ಲಿ ಎಂಟು ಕಡೆ ಮರಗಳು ಧರೆಗುರುಳಿದ್ದು, ರಾತ್ರಿ ಸಂಚಾರ ಮಾಡದೇ ಇರುವುದು ಉತ್ತಮವೆಂದು ಸ್ಥಳೀಯರು ತಿಳಿಸಿದ್ದಾರೆ.
















