ಐವರ್ನಾಡಿನಲ್ಲಿ ಅಂಗಡಿಯ ಎದುರು ನಿಲ್ಲಿಸಿದ್ದ ಪಿಕಪ್ ವಾಹನವೊಂದು ಕೆಲವು ದಿನಗಳ ಹಿಂದೆ ನಿಲ್ಲಿಸಿದ ಕಳವಾಗಿದ್ದು ಕಾರ್ಕಳದಲ್ಲಿ ಪತ್ತೆಯಾದ ಘಟನೆ ಆ.19 ರಂದು ನಡೆದಿದೆ.
ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್,ಶಾಮಿಯಾನ ಅಂಗಡಿ ಮಾಲಕ ಸುನಿಲ್ ನಿಡ್ಡಾಜೆಯವರು ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದ ಪಿಕಪ್ ಕಾಣೆಯಾಗಿತ್ತು.
ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು. ಇಂದು ಕಾರ್ಕಳ ತಾಲೂಕಿನ ಮುಡೂರು ಎಂಬಲ್ಲಿ ಪಿಕಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ನಾಪತ್ತೆಯಾದ ಪಿಕಪ್ ಪತ್ತೆ



































