ಗುತ್ತಿಗಾರು: ಗಣೇಶೋತ್ಸವ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ ಪೊಲೀಸರು

ವಳಲಂಬೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ಇಂದು(ಆ.27) ರಾತ್ರಿ ನಡೆದಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆ ನಂತರ ನಡೆಸಬಾರದು ಎಂದು ಸರ್ಕಾರದ ಆದೇಶವಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿದರು. ಅದಾಗಲೇ 10 ಗಂಟೆ ಕಳೆದಿದ್ದು 30 ನಿಮಿಷಗಳ ಕಾರ್ಯಕ್ರಮ ಬಾಕಿ ಇರುವಾಗಲೇ ಕಾರ್ಯಕ್ರಮಗಳು ದಿಢೀರ್ ಸ್ಥಗಿತಗೊಂಡಿತು.
ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಸೇರಿರುವ ಭಕ್ತಾದಿಗಳು ಹಾಗೂ ಕಲಾವಿದರಿಗೆ ನಿರಾಶೆಯಾಗಿದ್ದು, ಸರ್ಕಾರದ ಆದೇಶಕ್ಕೆ ಅಸಮಾಧಾನಗೊಂಡರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top