ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ,ಕೊಲೆ ಶಂಕೆ

ಪೈಚಾರು ಮೂಲದ ವಿವಾಹಿತ ಮಹಿಳೆಯೋರ್ವರ ಶವ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.
ಹಳೆಗೇಟು ಅಡ್ಕ ಬಳಿ ಬಾಡಿಗೆ ಮನೆಯಲ್ಲಿ ಗುರುವಾರ ಮಧ್ಯಾಹ್ನ ಆತ್ಮ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಕೌಟುಂಬಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ
ಆದರೆ ಘಟನೆ ನಡೆದ ಸಂದರ್ಭ ಆಕೆಯ ಪತಿ ಸ್ಥಳದಲ್ಲಿಯೇ ಇದ್ದು ಮನೆಯವರು ಪತ್ನಿಯ ಮನೆಯವರು ಬಂದ ಸಮಯ ಅಲ್ಲಿಂದ ಆತ ಪರಾರಿಯಾಗಿರುವುದರಿಂದ ಇದು ಕೊಲೆಯಾಗಿರಬಹುದೇ ಎಂಬ ಅನುಮಾನವೂ ಮೂಡಿರುವುದಾಗಿ ಹೇಳಲಾಗುತ್ತಿದೆ.
ಮನೆಯೊಳಗೆ ಬೊಬ್ಬೆ ಹೊಡೆಯುವ ಶಬ್ದ ಕೇಳಿ ಸ್ಥಳೀಯರು ಹೋಗಿ ನೋಡುವ ಸಂದರ್ಭ ಮಹಿಳೆ ನೆಲದ ಮೇಲೆ ಬಿದ್ದಿದ್ದರು ಎನ್ನಲಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಆದರೆ ಮಹಿಳೆ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಖೆಯ ಬಳಿಕವೇ ತಿಳಿಯಬೇಕಾಗಿದೆ.
ಘಟನೆ ನಡೆದ ಕೂಡಲೇ ಮಹಿಳೆಯ ಪತಿ ಅಜ್ಜಾವರ ಮೂಲದ ಲತೀಫ್ ಎಂಬಾತ ಪರಾರಿಯಾಗಿದ್ದು ನಾನಾ ರೀತಿಯ ಚರ್ಚೆಗೆ ಕಾರಣ ವಾಗಿದೆ.
ಮೃತದೇಹ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಸ್ಥಳದಲ್ಲಿ ಮಹಿಳೆಯ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ನೂರಾರು ಮಂದಿ ಜಮಾವಣೆ ಗೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top