ಅರಂತೋಡು : ಈದ್ ಮಿಲಾದ್ ಆಚರಣೆ

ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಷನ್, ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಅಕರ್ಷಕ ಮೀಲಾದ್ ರ್ಯಾಲಿ, ಮದರಸ ವಿದ್ಯಾರ್ಥಿಗಳಿಂದ ಕಲೋತ್ಸವ ಹಾಗೂ ಮೌಲೂದ್ ಪಾರಾಯಣ ಸೆ.5 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಡಾ| ಕೆ.ಎಂ. ಶಾಜ್ ಮುಸ್ಲಿಯಾರ್ ಅವರ ವೇದಿಕೆಯಲ್ಲಿ ನಡೆಯಿತು.
ಖತೀಬರಾದ ಬಹು| ಇಸ್ಮಾಯಿಲ್ ಪೈಝಿ ಗಟ್ಟಮನೆ, ಅವರು ದುವಾಃ ಆಶೀರ್ವಚನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾತ್ ಅಧ್ಯಕ್ಷರಾದ ಆಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ಮದರಸ ವಿದ್ಯಾರ್ಥಿಗಳ ಕಲೋತ್ಸವ ನೇತೃತ್ವವನ್ನು ಸದರ್ ಅಶ್ರಫ್ ಮುಸ್ಲಿಯಾರ್ ಹಾಗೂ ಸಹಾಯಕ ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ವಹಿಸಿದ್ದರು. ಮದರಸದ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಧಫ್ ಪ್ರದರ್ಶನ, ಫ್ಲವರ್ ಶೋ ಆಕರ್ಷಕವಾಗಿ ನಡೆಯಿತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸಮಸ್ತ, ಪಿಯುಸಿ , ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮೊಹಮ್ಮದ್, ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಅನ್ವರಲ್ ಹುದಾ ಎಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್ ಅರಂತೋಡು, ಅರಂತೋಡು ಜಮಾತ್ ಸೌದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝಿಝ್ ಪೆಲ್ತಡ್ಕ, ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದರುದ್ದೀನ್ ಪಠೇಲ್, ದಿಕ್ರ್ ಸ್ವಲತ್ ಸಮಿತಿ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಎ ಹೆಚ್ ವೈ ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಅಜರುದ್ದೀನ್ , ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್ , ತಾಜುದ್ದೀನ್ ಅರಂತೊಡು, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್ , ಹಾಜಿ ಅಬ್ದುಲ್ ಖಾದರ್ ಪಠೇಲ್, ಸಂಶುದ್ದೀನ್ ಪೆಲ್ತಡ್ಕ, ಎ ಹನೀಫ್ , ಮನ್ಸೂರ್ ಪಾರೆಕ್ಕಲ್, ಅರಂತೋಡು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ, ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಮೋಯಿದು ಕುಕ್ಕುಂಬಳ, ದುಬೈ ಸಮಿತಿ ಸದಸ್ಯ ಕೆಎಂ ಅನ್ವಾರ್ , ರಿಫಾಯಿ ಪಠೇಲ್ ದುಬೈ , ಸೌದಿ ಸಮಿತಿ ಗೌರವಾಧ್ಯಕ್ಷ ಮಹಮ್ಮದ್ ಕಮಾಲ್ ಪಾರೆಕ್ಕಲ್, Joಮುಜೀಬ್ ಅರಂತೋಡು, ನಿರ್ಣಾಯಕರಾದ ಜವಾದ್ ಪಾರೆಕ್ಕಲ್, ಕೆ ಎಂ, ಮೋಹ್ಸೀನ್ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಅನ್ನದಾನ ನಡೆಯಿತು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top