ಇಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ರಾತ್ರಿ 8:58ಕ್ಕೆ ಆರಂಭವಾಗಲಿದೆ. ರಾತ್ರಿ 9:57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗುತ್ತದೆ. ರಾತ್ರಿ 11:01 ರಿಂದ 12:23 ರವರೆಗೆ ಸಂಪೂರ್ಣ ಗ್ರಹಣ ಇರಲಿದೆ. ಈ ವೇಳೆ ಕೆಂಪು ಚಂದಿರನನ್ನು ನೋಡಬಹುದಾಗಿದೆ. ಗ್ರಹಣ ತಡರಾತ್ರಿ 1:27ಕ್ಕೆ ಕೊನೆಗೊಳ್ಳಲಿದೆ. ಭಾರತದ ಜೊತೆಗೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಯುರೋಪ್‌ನಲ್ಲಿಯೂ ಚಂದ್ರಗ್ರಹಣ ಗೋಚರಿಸುತ್ತದೆ. ಗ್ರಹಣದ ವೇಳೆ ರಾಜ್ಯದ ದೇವಾಲಯಗಳನ್ನು ಕೆಲ ಸಮಯ ಮುಚ್ಚಲಾಗುವುದು.
ಇಂದು ಸಂಪೂರ್ಣ ಚಂದ್ರಗ್ರಹಣ,ಇಲ್ಲಿದೆ ಗ್ರಹಣ ಸಮಯದ ಸಂಪೂರ್ಣ ಮಾಹಿತಿ

















