ಬಡನದಲ್ಲಿ ಬೆಳೆದು ತನ್ನ ತಂದೆಯನ್ನು ಎಳವೆಯಲ್ಲಿ ಕಳೆದುಕೊಂಡು ಕುಟುಂಬದ ಜವಾಬ್ದಾರಿ ಹೆಗಲಮೇಲೆರಿಸಿಕೊಂಡ ಹಳ್ಳಿ ಯುವತಿಯೊಬ್ಬರು ದೇಶ ಕಾಯುವ ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಗೊಂಡು ಸುಳ್ಯ ತಾಲೂಕು ಸಂಭ್ರಮ ಪಡುತ್ತಿದೆ.
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಬೆದ್ರಪಣೆ ದಿ. ನಾಗಪ್ಪ ಗೌಡ ಎಂ.ಎ., ಜಾನಕಿ ದಂಪತಿಯ ಹಿರಿಯ ಪುತ್ರಿ ಸುಶ್ಮಿತ ಎಸ್.ಎಸ್.ಸಿ.ಜಿಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ಬಿ.ಎಸ್.ಎಫ್ ಗೆ ಆಯ್ಕೆಯಾದ ತಾಲೂಕಿನ ಹೆಮ್ಮೆಯ ಪ್ರತಿಭೆ. ತಂದೆ ತಾಯಿ ಕೂಲಿ ಕಾರ್ಮಿಕರಾಗಿ ದುಡಿದು ಸುಶ್ಮಿತಾ,ತಂಗಿ ನಿಶ್ಮಿತಾರನ್ನು ಸಾಕುತ್ತಿದ್ದರು.
ತಂದೆಯ ಅಕಾಲಿಕ ನಿಧನದಿಂದ ಸುಶ್ಮಿತಾ ಕುಟುಂಬಕ್ಕೆ ಬರ ಸಿಡಿಲಬಡಿದಂತಾಯಿತು. ಬಳಿಕ ಸುಶ್ಮಿತ ಕುಟುಂಬದ ಜವಾಬ್ದಾರಿ ಹೊರುವ ಅನಿವಾರ್ಯತೆ ಎದುರಾಯಿತು.ತನ್ನ ವಿದ್ಯಾಭ್ಯಾಸವನ್ನು ಪದವಿಗೆ ಕೊನೆಗೊಳಿಸಿ ಖಾಸಗಿ ಉದ್ಯೋಗದತ್ತ ಮುಖ ಮಾಡಿ ಟೈ್ಲ್ಸ್ ಅಂಗಡಿಯೊಂದಕ್ಕೆ ಸೇರಿ.ತಂಗಿಗೆ ಪ್ಯಾರಾಮೆಡಿಕಲ್ ಕೋರ್ಸ್ ವಿದ್ಯಾಭ್ಯಾಸ ಕಲಿಸಿ ಕುಟುಂಬ ನಿರ್ವಾಹಣೆ ಮಾಡುತ್ತಿದ್ದಾರೆ.
ನೆಟ್ ವರ್ಕ್ ಇಲ್ಲದ ಗ್ರಾಮೀಣ ಪ್ರತಿಭೆಯ ಕತೆ ಕೇಳಿದರೆ ನಿಮಗೂ ವ್ಯಥೆಯಾಗದಿರದು. ಸುಳ್ಯ ತಾಲೂಕು ಕೇಂದ್ರದಿಂದ ಇವರ ಮನೆ ಇರುವ ಆರಂತೋಡು ಗ್ರಾಮದ ಬೆದ್ರುಪಣೆಗೆ ಬರೋಬ್ಬರಿ 25 ಕಿ.ಮೀ ದೂರ ಇದೆ. ಸುಳ್ಯಕ್ಕೆ ಉದ್ಯೋಗಕ್ಕೆ ಕಾಡಾನೆಗಳ ಹಾದಿಯಲ್ಲಿ 25 ಕಿ.ಮೀ ಬಂದು ಪುನ ಹಿಂದಿರಬೇಕು.ಬೆದ್ರುಪಣೆ ಭಾಗದಲ್ಲಿ ಕೇವಲ 25 ಕುಟುಂಬ ವಾಸಿಸುವ ಕಾಡಿನಂಚಿನಲ್ಲಿರುವ ಊರು. ಈ ಸಣ್ಣ ಹಳ್ಳಿಯ ಸುಶ್ಮಿತ ತನ್ನ ಊರಿನ ಹಲವು ಕೊರತೆಗಳ ಮಧ್ಯೆ ಸವಾಲುಗಳನ್ನು ಮೆಟ್ಟಿನಿಂತು ಬೆಳೆದ ಪ್ರತಿಭೆ. ಊರಲ್ಲಿ ನೆಟ್ ವರ್ಕ್ ಇಲ್ಲ.ವಿದ್ಯುತ್ ಸಮಸ್ಯೆ,ಹದಗೆಟ್ಟ ಕಾಡಿನ ರಸ್ತೆ ಇವುಗಳೆಲ್ಲ ಊರಿನ ಕೊರೆತೆಯಾಗಿದೆ. ಯೂಟ್ಯೂಬ್, ಪುಸ್ತಕ, ಪತ್ರಿಕೆಗಳ ಓದಿನ ಜೊತೆಗೆ ತನ್ನ ತಂಗಿ ಹಾಗೂ ತಾಯಿಯ ಜೊತೆಗೆ ವಾಸಿಸುತ್ತಿದ್ದಾರೆ.
ಸುಶ್ಮಿತ ತನ್ನ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಳಾಗಿದ್ದು. ಇದರಲ್ಲಿ ಅವರ ಗಮನ ಸೆಳೆದದ್ದು ಭಾರತೀಯ ಸೈನ್ಯದ ಸಮವಸ್ತ್ರ.ಮುಂದೆ ತನ್ನ ಪೋಷಕರ ಕಷ್ಟಗಳಿಂದ ಪಾರು ಮಾಡಲು ಸತತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರಾರಂಭಿಸಿದ ಅದಾದ ಬಳಿಕ ಮುಂದೆ ಪೋಲಿಸ್ ಇಲಾಖೆಯ ಎಸೈ,ಪೊಲೀಸ್ ಪೇದೆ , ಮಿಲಿಟರಿ, ಅಗ್ನಿಪತ್, ಅರಣ್ಯ ರಕ್ಷಕ ಹುದ್ದೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡಾ ಬರೆದಿದ್ದಾಳೆ ಈಗ ಅಂತಿಮವಾಗಿ ತನ್ನ ಆಸೆಯಂತೆಯೇ ಎಸ್‌ಎಸ್‌ಸಿ ಜಿಡಿ ಪರೀಕ್ಷೆ ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಕನಸು ನನಸಾಗಿಸಿಕೊಂಡಿದ್ದಾರೆ.
ಸುಶ್ಮಿತಾ ಓಡಾಡುವ ಹಾದಿಯ ಪರಿಸರದಲ್ಲಿ ಕಾಡುಕೋಣ,ಕಾಡಾನೆಗಳ ಸಂಚಾರ ಜಾಸ್ತಿ,ಒಂದು ದಿವಸ ಕೆಲಸ ಮುಗಿಸಿ ಸುಶ್ಮಿತಾ ಮನೆಗೆ ಬರುವಾಗ ಕಾಡಾನೆ ರಸ್ತೆಯಲ್ಲಿ ಮುಖಾಮುಖಿಯಾಗಿತ್ತು.ಕೂಡಲೇ ಅಕೆ ತನ್ನ ದ್ವಿಚಕ್ರ ವಾಹನ ತಿರುಗಿಸಿ ಜೋರಾಗಿ ಗಾಡಿ ಓಡಿಸಿ ಅಪಾಯದಿಂದ ಪಾರಾಗಿದ್ದರು.
ನಿರಂತರ ಅಧ್ಯಾಯನ,ಸತತ ಪ್ರಯತ್ನ ಇಂತಹ ಉದ್ಯೊಗಕ್ಕೆ ಅಗತ್ಯ.ಇದರಿಂದ ನಾನು ಯಶಸ್ವಿ ಕಂಡಿದ್ದೇನೆ.ಭಾರತೀಯ ಸೈನ್ಯ ಸೇರಬೇಕೆನ್ನುವ ಕನಸು ಕೊನೆಗೂ ಇಡೇರಿದೆ.ಸೈನ್ಯದಲ್ಲಿ ಉನ್ನತ ಅಧ್ಯಾಯನಕ್ಕೆ ಅವಕಾಶ ಸಿಕ್ಕಿದರೆ ಸೈನ್ಯದಲ್ಲಿ ಇನ್ನಷ್ಟು ಉನ್ನತ ಹುದ್ದೆಗೆ ಏರಬೇಕೆನ್ನುವ ಕನಸು ಇದೆ ಎಂದು ಸುಶ್ಮಿತ ತನ್ನ ಮನದ ಮಾತನ್ನು ಮಾರ್ದನಿ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.
ಒಂದು ವಾರದ ಬಳಿಕ ಸುಶ್ಮಿತಾ ತರಬೇತಿಗೆ ತೆರಳಲಿದ್ದಾರೆ.
ಜೈ ಜವಾನ್ …ಆಲ್ ದಿ ಬೆಸ್ಟ್ ಸುಶ್ಮಿತಾ.





















































