ಶ್ರೀ ಕ್ಷೇ ಧ ಗ್ರಾ ಯೋಜನೆ, ಪ್ರಗತಿಬಂಧು ಸ್ವ ಸಹಾಯ ಸಂಘ ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ “ಪೂಜಾ ಸಮಿತಿ ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಇದರ
ವತಿಯಿಂದ 2026ನೇ ಸಾಲಿನ “ಶ್ರೀವರಮಹಾಲಕ್ಷ್ಮೀ ” ಪೂಜಾ ಸಮಿತಿ ರಚನೆ ಬಗ್ಗೆ ಶ್ರೀ ವಿನಾಯಕ ” ಸಭಾ ಭವನ ರೆಂಜಾಳದಲ್ಲಿ ಸಭೆ ನಡೆಯಿತು. ಸಂಪಾಜೆ ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾಜೆ ವಲಯ ಜನಜಾಗೃತಿ ಅಧ್ಯಕ್ಷರಾದ ಸತೀಶ್ ರಾವ್ ದಾಸರಬೈಲು ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ರೆಂಜಾಳ ದೇವಳದ ವಿವಿದ ಸಮಿತಿಯ ಪದಾಧಿಕಾರಿಗಳು. ನಿಕಟಪೂರ್ವ ಅಧ್ಯಕ್ಷರು. ಒಕ್ಕೂಟ ಅಧ್ಯಕ್ಷರುಗಳು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವರಮಹಾಲಕ್ಷ್ಮೀಪೂಜಾ ಸಮಿತಿಯ ಗೌರವ ಅಧ್ಯಕ್ಷರಾಗಿ ಮಹಾಬಲ ಗೌಡ ಕಟ್ಟಕೋಡಿ. ಪೂಜಾ ಸಮಿತಿ ಅಧ್ಯಕ್ಷರಾಗಿ ಗೀತಾ ಹೊಸೋಳಿಕೆ. ಉಪಾಧ್ಯಕ್ಷರಾಗಿ ಶಕುಂತಳಾ ಪನ್ನೆ ಮರ್ಕಂಜ, ಧನ್ಯ ಬೇರಿಕೆ.
ಕಾರ್ಯದರ್ಶಿಯಾಗಿ ರೋಹಿಣಿ ಕೆ ಮರ್ಕಂಜ ಸೇವಾ ಪ್ರತಿನಿಧಿ. ಕೋಶಾಧಿಕಾರಿಗಳಾಗಿ ದಿನಕರ ಕಾಳಮನೆ. ನಾರಾಯಣ ನಾಯ್ಕ
ಅಜ್ಜಿ ಕಲ್ಲು.ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸೇವಾ ಪ್ರತಿನಿಧಿ ರೋಹಿಣಿ ಮರ್ಕಂಜ ಸ್ವಾಗತಿಸಿದರು. ಸಭೆಯ ಕೊನೆಗೆ ರಾಜೇಂದ್ರ ಕುಮಾರ್ ಬಲ್ನಾಡು ಪೇಟೆ ವಂದಿಸಿದರು
ಮರ್ಕಂಜ : ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ





































































