ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಪೇರೆಂಟ್ ಓರಿಯೆಂಟಷನ್ ಪ್ರೋಗ್ರಾಮ್

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2026ರ ಪೋಷಕರ ಪರಿಚಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಪೋಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೌನ್ಸಿಲರ್ ಕಾವ್ಯ ಅವರು “ಸಂತೋಷದ ಪೋಷಕತ್ವ (Happy Parenting)” ಕುರಿತು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕ ಉಪನ್ಯಾಸ ನೀಡಿ, ಮಕ್ಕಳನ್ನು ಪ್ರೀತಿ, ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವದಿಂದ ಬೆಳೆಸುವ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಶಾಲೆಯ ಕರಸ್ಪಾಂಡೆಂಟ್ ಗೀತಾಂಜಲಿ ಟಿ. ಜಿ. ಅವರು ಮಾಂಟೆಸ್ಸೋರಿ ಶಿಕ್ಷಣ ಪದ್ಧತಿಯ ಪರಿಚಯ ಮಾಡಿಕೊಟ್ಟು, ಅದರ ತತ್ವಗಳು, ತರಗತಿ ವಾತಾವರಣ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಅದರ ಮಹತ್ವವನ್ನು ವಿವರಿಸಿದರು. ಬಳಿಕ ಪೋಷಕರೇ ಮಾಂಟೆಸ್ಸೋರಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದರ ಅನುಭವವನ್ನು ಪಡೆದರು.
ಶಾಲೆಯ ಅಧ್ಯಕ್ಷರಾದ ಶುಭಾಕರ ಬಿ. ಸಿ. ಅವರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಕುರಿತು ಮಾತನಾಡಿ, “ಮೌಲ್ಯಗಳನ್ನು ಕೇವಲ ಹೇಳಿಕೊಡುವುದಲ್ಲ, ನಾವು ಆಚರಣೆಯ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮವನ್ನು ಫಾಬಿದಾ ಅವರು ನಿರೂಪಿಸಿದರು. ಶ್ವೇತಾ ಅವರು ವಂದನಾರ್ಪಣೆ ಸಲ್ಲಿಸಿ, ಮುಖ್ಯ ಅತಿಥಿ, ಪೋಷಕರು, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಪೋಷಕರ ಪರಿಚಯ ಕಾರ್ಯಕ್ರಮವು ಪೋಷಕರಿಗೆ ಮಾಂಟೆಸ್ಸೋರಿ ಶಿಕ್ಷಣ ಪದ್ಧತಿ ಹಾಗೂ ಪರಿಣಾಮಕಾರಿ ಪೋಷಕತ್ವದ ಕುರಿತು ಉತ್ತಮ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವು ಶ್ವೇತಾ ಹಾಗೂ ಕುಮಾರಿ ಸುಕನ್ಯಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು ಸಂಗೀತಾ ಅವರು ಎಲ್ಲರನ್ನು ಸ್ವಾಗತಿಸಿದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top