ಮನೆಯ ಹಿಂಬದಿಯ ಬಾವಿಗೆ ಬಿದ್ದ ಮಗುವಿನ ರಕ್ಷಣೆ

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಘಟನೆ ಕೊಣಾಜೆಯ ಬೆಳ್ಳ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿಂದ ವರದಿಯಾಗಿದೆ.





















































































ಒಂದು ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಾ ಹೋಗಿ ಮನೆಯ ಹಿಂಭಾಗದಲ್ಲಿ ಇರುವ ಬಾವಿಗೆ ಬಿದ್ದಿದೆ. ಕೂಡಲೇ ಮನೆ ಮಂದಿ ಬೊಬ್ಬೆ ಹಾಕಿದಾಗ ಮಗುವಿನ ಚಿಕ್ಕಪ್ಪ ಜೀವನ್ ಬಾವಿಗೆ ಹಾರಿದ್ದಾರೆ. ಬಳಿಕ ಸ್ಥಳೀಯ ಯುವಕ ವಿವೇಕ್ ಪೂಜಾರಿ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ . ಅದೃಷ್ಟವಶಾತ್ ಯಾವುದೇ ಅಪಾಯವಾಗದೇ ಮಗು ತಾಯಿಯ ಮಡಿಲು ಸೇರಿದೆ.

ಬಳಿಕ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ಪರೀಕ್ಷೆ ನಡೆಸಿ ಮಗು ಆರೋಗ್ಯವಾಗಿದೆ ಎಂದು ಖಚಿತಪಡಿಸಿದ್ದಾರೆ. ಯುವಕರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top