ಗೂನಡ್ಕ ತೆಕ್ಕಿಲ್ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಭಿವೃದ್ಧಿ ಬಗ್ಗೆ ಸಮಾಲೋಚನಾ ಸಭೆ

ಅರಂತೋಡು,ಮಾ 24 : ತೆಕ್ಕಿಲ್ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗೂನಡ್ಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಸರ್ವತೋಮುಖ ಬೆಳವಣಿಗೆ ಮತ್ತು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸಮಾಲೋಚನಾ ಸಭೆ ನಡೆಯಿತು‌.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.
ಪೋಷಕರು ನಿವೃತ್ತ ಅಧ್ಯಾಪಕರ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಗ್ರಾಮೀಣ ಪ್ರದೇಶದ ತೆಕ್ಕಿಲ್ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಶಿಕ್ಷಣ ಸಂಸ್ಥೆಯನ್ನು ಬೆಳೆಸಬೇಕೆಂದು ಎಲ್ಲರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಮುಂದಿನ ದಿನದಲ್ಲಿ ಸುಸ್ಸಜ್ಜಿತವಾದ ತರಗತಿ ಕೋಣೆಗಳು ಶಾಲಾ ವಾಹನ ಖರೀದಿ ಮತ್ತು ಉತ್ತಮ ಆಡಳಿತ ಮಂಡಳಿಯನ್ನು ರಚಿಸಿ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು.
ಸಭೆಯಲ್ಲಿ ನಿವೃತ್ತ ಮುಖ್ಯೋಪಾದ್ಯಾಯ ದಾಮೋದರ ಮಾಸ್ತರ್, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಎ ಅಬ್ದುಲ್ಲ, ಸಂಪಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಸುಮತಿ ಶಕ್ತಿ ಮೇಲು, ಉಪಾಧ್ಯಕ್ಷ ಎಸ್. ಕೆ ಹನೀಫ್ ಸಂಪಾಜೆ, ದಿನಕರ ಸಣ್ಣಮನೆ, ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ತಾಜ್ ಮೊಹಮ್ಮದ್ ಸಂಪಾಜೆ, ಹಾಜಿ ಪಿ.ಎ ಉಮ್ಮರ್ ಗೂನಡ್ಕ, ವಿಮಲ ಪ್ರಸಾದ್, ಅಶ್ರಫ್ ಗುಂಡಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಇಸಾಕುದ್ಧೀನ್ ಅರಂತೋಡು, ಸಾಧಿಕ್ ಮಾಸ್ಟರ್, ಅಬ್ದುಲ್ ಸಲಾಂ, ಸಂಶುದ್ಧೀನ್ ದರ್ಖಾಸ್, ಶಿಕ್ಷಕಿಯರಾದ ಸಾಧಿಕ್ ಆಯಿಷಾತ್ ಸಬೀರಾ, ಬುಶ್ರಾ, ಆಯಿಷತ್ ಸುನೈನಾ, ಕೈರುನ್ನೀಸಾ ಎಸ್.ಇ, ಸೋನಿಯಾ ದಿಲ್ ಶಾನಾ, ಆಯಿಷತ್ ಇರ್ಶಾನ ಮೊದಲಾದವರು ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಂಪತ್ ಜೆ.ಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





















































































Leave a Comment

Your email address will not be published. Required fields are marked *

error: Content is protected !!
Scroll to Top