ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ಚಾಲಕ ಹ್ರದಯಘಾತದಿಂದ ಸಾವನ್ನಪ್ಪಿದ ಮೇ.8ರಂದು ಮುಂಜಾನೆ ಮಡಿಕೇರಿ ಬಳಿಯ ಕಾಟಿಗೇರಿಯಿಂದ ವರದಿಯಾಗಿದೆ.
ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪೂರ್ಣಿಮ ಬಸ್ ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿತು. ಇಂದು ಮುಂಜಾನೆ ಮಡಿಕೇರಿ ದಾಟಿ ಬರುತ್ತಿರುವಾಗ ಕಾಟಿಕೇರಿ ಬಳಿ ತಿರುವಿನಲ್ಲಿ ಬಸ್ ಚಾಲಕ ಶಿವಕುಮಾರ್ ಹೃದಯಾಘಾತಕ್ಕೊಳಗಾಗಿ ಬಸ್ ನಿಯಂತ್ರಣ ತಪ್ಪಿ ಬದಿಗೆ ಸರಿದು ಬರೆಗೆ ಒರಗಿ ನಿಂತಿತು. ಬಸ್ ಚಾಲಕ ಕುಳಿತಲ್ಲೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆ ಸಂದರ್ಭ ಚಾಲಕ ಶಿವಕುಮಾರ್ ಬಸ್ ನಿಲ್ಲಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಬದಿಗೆ ಕೊಂಡೊಯ್ದು ಬರೆಗೆ ಗುದ್ದಿಸಿ ನಿಲ್ಲಿಸಿದರೆಂದು ಹೇಳಲಾಗುತ್ತಿದೆ.
ಮಡಿಕೇರಿ ಮಂಗಳೂರು ರಸ್ತೆಯಲ್ಲಿ ಬಸ್ಸು ಚಾಲಕನಿಗೆ ಹೃದಯಘಾತವಾಗಿ ಬರೆಗೆ ಗುದ್ದಿದ ಬಸ್ಸು ,ಚಾಲಕ ಸಾವು,ಪ್ರಯಾಣಿಕರು ಪಾರು





















































