ಸುಳ್ಯ ತಾಲೂಕಿನ ಸಂಜೀವಿನಿ ಕೃಷಿಸಖಿ, ಪಶುಸಖಿಯರಿಗೆ ಡಿ ಸಿ ಆರ್ ಪುತ್ತೂರು ವತಿಯಿಂದ ತರಬೇತಿ ಕಾರ್ಯಕ್ರಮ

ಭಾ. ಕೃ. ಸಂ. ಪ. – ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಸಹಯೋಗದಲ್ಲಿ 11.05.2026 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೃಷಿ ಸಖಿಯರು ಮತ್ತು ಪಶುಸಖಿಯರಿಗಾಗಿ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಭಾರತ ಸರ್ಕಾರದ ವತಿಯಿಂದ ದೇಶವ್ಯಾಪಿಯಾಗಿ ಹಮ್ಮಿಕೊಳ್ಳಲಾದ “Intensive Awareness Campaign for the Adoption of Science Based Nutrient and Other Input Management” ಅಭಿಯಾನದ ಅಂಗವಾಗಿ ಈ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ಯಾರಾ ವಿಸ್ತರಣಾ ಕಾರ್ಯಕರ್ತರಾಗಿರುವ ಕೃಷಿ ಸಖಿಯರು ಮತ್ತು ಪಶುಸಖಿಯರಿಗೆ ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ, ಸಾವಯವ ಗೊಬ್ಬರಗಳು ಹಾಗೂ ಜೈವಿಕ ಗೊಬ್ಬರಗಳ ಮೂಲಕ ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಸುಳ್ಯ ತಾಲೂಕಿನ ಇಓ ರಾಜಣ್ಣ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಭಾಗವಹಿಸಿದವರು ಈ ಮಾಹಿತಿಯನ್ನು ಸಮರ್ಪಕವಾಗಿ ಬಳಸಿಕೊಂಡು ರೈತರಿಗೆ ತಲುಪಿಸಬೇಕೆಂದು ಕರೆ ನೀಡಿದರು. ಬಳಿಕ ಡಾ. ಈರದಾಸಪ್ಪ ಇ ಅವರು ಗೋಡಂಬಿ ಹಾಗೂ ಅಡಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಯ ಅಗತ್ಯತೆ ಕುರಿತು ವಿವರಿಸಿದರು. ಡಾ. ಅಶ್ವತಿ ಚಂದ್ರಕುಮಾರ್ ಅವರು ಮಣ್ಣಿನ ಆರೋಗ್ಯ ಚೀಟಿ (Soil Health Card) ಹಾಗೂ ಅಗತ್ಯಾಧಾರಿತ ಗೊಬ್ಬರ ಬಳಕೆಯ ಮಹತ್ವವನ್ನು ತಿಳಿಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ವೇತಾ ವಿ ಜಿ ಯವರು ಗೇರು ಕೃಷಿಯ ಬಗ್ಗೆ ಈಗಷ್ಟೇ ರೈತರು ಪ್ರಮುಖ ಬೆಳೆಯಾಗಿ ತೆಗೆದುಕೊಳ್ಳಲು ಸಾಧ್ಯವಿದೆ ಎನ್ನುವುದರ ಬಗ್ಗೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟರವರೆಗೆ ಉಪಬೆಳೆಯಾಗಿ ಮಾತ್ರ ಬೆಳೆಯುತ್ತಿದ್ದರು. ಹನ್ನೊಂದು ಬಗೆಯ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಗೇರು ಹಣ್ಣಿನಿಂದ ಮಾಡಬಹುದು ಎಂದು ಇತ್ತೀಚೆಗಷ್ಟೇ ಕೃಷಿಕರಿಗೆ ಗೊತ್ತಾಗುತ್ತಿದೆ ಎಂದು ಹೇಳಿದರು. ತರಬೇತಿ ಬಳಿಕ ಸಖಿಯರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಒಟ್ಟು 32 ಕೃಷಿ ಸಖಿ, ಪಶುಸಖಿಯರು ಭಾಗವಹಿಸಿದ್ದರು. ಸಂಜೀವಿನಿ ತಾಲೂಕು ಪಂಚಾಯತ್ ಸಿಬ್ಬಂದಿಗಳಾದ ಜಯಲಕ್ಷ್ಮಿ, ಶ್ರೀನಿಧಿ, ಹೃತಿಕ್ ಹಾಗೂ ತಾಲೂಕ್ ಪಂಚಾಯತ್ ಸಿಬ್ಬಂದಿಗಳಾದ ರಾಜೇಶ್, ಪ್ರಸಾದ್ , ಜಯಪ್ರಕಾಶ್ ಸಹಕಾರ ನೀಡಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಧನ್ಯವಾದವನ್ನು ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ನಿರ್ವಹಿಸಿದರು.



































































































Leave a Comment

Your email address will not be published. Required fields are marked *

error: Content is protected !!
Scroll to Top