ಅಜ್ಜಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯು ಇದೇ ಜೂನ್ ತಿಂಗಳ 21ರಂದು ನಡೆಯಲಿದ್ದು, ಈ ಚುನಾವಣೆಯಲ್ಲಿ ನಮ್ಮ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 11 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಳಿದಿರುವ ಎಲ್ಲಾ 9 ನಿರ್ದೇಶಕ ಸ್ಥಾನಗಳಿಗೆ ನಮ್ಮ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಮ್ಮ ಪ್ರತಿಸ್ಪರ್ಧಿ ತಂಡದಿಂದ (ರಾಹುಲ್ ಅಡ್ಪಂಗಾಯ ಮತ್ತು ಬಳಗ) ಕೇವಲ 6 ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿ ಕೋರ್ಟ್ ಮುಖಾಂತರ ಅನರ್ಹ ಮತದಾರರಿಗೆ ಮತ ಸಿಗುವಂತೆ ಮಾಡಿಸಿ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದು ಅದು ವಿಫಲಗೊಂಡಾಗ ಇದೀಗ ಕೊನೆಯ ಕ್ಷಣದಲ್ಲಿ ಸೋಲಾಗುವ ಭಯದಿಂದ ಚುನಾವಣೆಯಿಂದ ಹಿಂದೆ ಸರಿದು ಅವಿರೋಧ ಆಯ್ಕೆಗೆ ಸಹಕರಿಸುತ್ತೇವೆ ಎಂಬ ಹೇಳಿಕೆ ನೀಡಿರುವುದು ಅವರ ಹತಾಶೆಯ ಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಸುಭೋದ್ ಶೆಟ್ಟಿ ಮೇನಾಲ
ವಿಕ್ರಂ ಅಡ್ಪಂಗಾಯ
ರಾಜೇಶ್ ಮೇನಾಲ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ನಮ್ಮ ಮತದಾರ ಬಂಧುಗಳು ಗಮನಿಸಬೇಕಾದ ಅಂಶಗಳೆಂದರೆ
* ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳು ಸಿಕ್ಕದೇ ಇರುವುದು ಅವರ ಮೊದಲನೇ ಸೋಲು.
* ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಅರ್ಹ ಸದಸ್ಯ ಮತದಾರರ ಬೆಂಬಲ ಅವರಿಗೆ ಇಲ್ಲದಿರುವುದು ಎರಡನೇ ಸೋಲು.
* ಹೈಕೋರ್ಟ್ ಮುಖಾಂತರ ಅನರ್ಹ ಮತದಾರರಿಗೆ ಮತದಾನದ ಹಕ್ಕನ್ನು ತರುವ ಪ್ರಯತ್ನಕ್ಕೆ ಹಿನ್ನಡೆಯಾಗಿರುವುದು ಮೂರನೇ ಸೋಲು.
* ಆಡಳಿತ ಪಕ್ಷದ ಸಹಕಾರದಿಂದ ಸಹಕಾರ ಇಲಾಖೆಗೆ ಒತ್ತಡ ತಂದು ಚುನಾವಣೆಯನ್ನು ರದ್ದು ಪಡಿಸಲು ಮಾಡಿದ ಕುತಂತ್ರ ವಿಫಲವಾಗಿರುವುದು ನಾಲ್ಕನೇ ಸೋಲು.
ನಮ್ಮ ಪ್ರತಿಸ್ಪರ್ಧಿಗಳಾದ ರಾಹುಲ್ ಅಡ್ಪಂಗಾಯ ಮತ್ತು ತಂಡದವರು ಶತಾಯಗತಾಯ ಪ್ರಯತ್ನ ಪಟ್ಟರೂ ಚುನಾವಣೆಯನ್ನು ಎದುರಿಸುವುದು ಕಷ್ಟ ಸಾಧ್ಯ ಎಂಬುದನ್ನು ಅರಿತಿದ್ದಾರೆ ಮತ್ತು ಹತಾಶೆಗೊಂಡಿದ್ದಾರೆ. ಹಾಗಾಗಿ, ಅವರು ಏಕಾಏಕಿ *ಅವಿರೋಧ ಆಯ್ಕೆಗೆ ನಮ್ಮ ಸಹಕಾರ* ಅನ್ನುವಂತಹ ಘೋಷಣೆ ಮಾಡಿರುವುದು ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಮಾಡಿಕೊಂಡಿರುವ ತಂತ್ರ. ಚುನಾವಣಾ ನೀತಿಯ ಪ್ರಕಾರ ಅಂತಿಮ ಸ್ಪರ್ಧಿಗಳ ಪಟ್ಟಿಯ ಪ್ರಕಟಣೆಯ ನಂತರ ಚುನಾವಣೆ ನಡೆಯಲೇಬೇಕಾಗಿದೆ. ಅದಕ್ಕಿಂತ ಮೊದಲು ನಾಮಪತ್ರ ಹಿಂತೆಗೆತ ಆದರೆ ಮಾತ್ರ, ಅವಿರೋಧ ಆಯ್ಕೆಯಾಗುತ್ತದೆ. ಚುನಾವಣೆ ಪ್ರಕ್ರಿಯೆಯ ಪ್ರಕಾರ ನಾಮಪತ್ರ ಹಿಂತೆಗೆತ ಆದ ನಂತರ ಅಭ್ಯರ್ಥಿಗಳ ಘೋಷಣೆ ಆಗುತ್ತದೆ. ಆ ಬಳಿಕ ಚುನಾವಣಾ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ಪತ್ರ ಬರೆದು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳುವ ಅವಕಾಶ ಇಲ್ಲವಾಗಿರುತ್ತದೆ. ಒಂದು ವೇಳೆ ಚುನಾವಣಾ ಕಣದಿಂದ ಹಿಂದೆ ಸರಿಯುವುದಿದ್ದರೆ, ಪತ್ರಿಕಾ ಪ್ರಕಟಣೆಯ ಮುಖಾಂತರ ತಮ್ಮ ಅಭಿಪ್ರಾಯವನ್ನು ಮತದಾರರಿಗೆ ತಿಳಿಸಬಹುದು. ಆದ್ದರಿಂದ ಖಂಡಿತಾ ಇದೊಂದು ಕುತಂತ್ರದ ಭಾಗವಾಗಿದ್ದು. ನಮ್ಮ ಅಭ್ಯರ್ಥಿಗಳ ಮತ್ತು ಮತದಾರರ ಹಾದಿ ತಪ್ಪಿಸುವ ಕೆಲಸ. ಹಾಗಾಗಿ ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಹಕರಿಸುತ್ತೇವೆ ಎಂಬ ಹೇಳಿಕೆ ನೀಡಿ ಮತದಾರರು ಚುನಾವಣೆಯಲ್ಲಿ ಭಾಗವಹಿಸದೆ ಇರುವಂತೆ ಮಾಡುವ ಕುತಂತ್ರಕ್ಕೆ ಒಳಗಾಗದೆ ಎಲ್ಲಾ ಅರ್ಹ ಸದಸ್ಯ ಮತದಾರರು ಜಾಗರೂಕರಾಗಿ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಲೇಬೇಕು ಎಂದು ತಿಳಿಸಿದ್ದಾರೆ.




























































