ಪಂಜ : ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಬೇಸಾಯದ ಪಾಠ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ

ಜೇಸಿಐ ಪಂಜ ಪಂಚಶ್ರೀ ಆಶ್ರಯದಲ್ಲಿ ಭಾರತ್ ಸೈಟ್ಸ್ & ಗೈಡ್ಸ್ ಸ್ಥಳಿಯ ಸಂಸ್ಥೆ ಪಂಜ ಇದರ ಸಹಯೋಗದೊಂದಿಗೆ ಸೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಬೇಸಾಯದ ಪಾಠ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ ಜೂ. 20 ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಗದ್ದೆಯಲ್ಲಿ ನಡೆಯಿತು.



















































































































ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ದೇವಿಪ್ರಸಾದ್‌ ಚಿಕ್ಕುಳಿ ಅಧ್ಯಕ್ಷತೆ ವಹಿಸಿದ್ದರು. ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಹಾಗೂ ಪಂಜ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶ್ರೀಮತಿ ಸ್ಮಿತಾ ಹೆಚ್.ಎಂ. ಮಾಹಿತಿದಾರರಾಗಿ ಆಗಮಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಭಾರತ್‌ ಸೈಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಕೆ.ಮಾಧವ, ಜೊತೆ ಕಾರ್ಯದರ್ಶಿ ಸರೋಜಿನಿ, ಜೇಸಿಐ ಪಂಜ ಪಂಚಶ್ರೀಯ ನಿಕಟ ಪೂರ್ವಾಧ್ಯಕ್ಷ ವಾಚಣ್ಣ ಕೆರೆಮೂಲೆ, ಕಾರ್ಯದರ್ಶಿ ಪ್ರಕಾಶ್ ಅಳ್ಳೆ, ಕಾರ್ಯಕ್ರಮ ನಿರ್ದೇಶಕ ಮದನ್ ಕೊಲ್ಯ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top