ಅರಂತೋಡು : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಾರ

ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಸ್. ಐ. ಆರ್. ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಅರಂತೋಡು. ಸಂಪಾಜೆ, ತೊಡಿಕಾನ, ಮರ್ಕಂಜ, ನೆಲ್ಲೂರು ಕೆಮ್ರಾಜೆ ಗ್ರಾಮಗಳ ಜಂಟಿ ಸಭೆ ನಡೆಯಿತು.
ಸಭೆಯಲ್ಲಿ ಕೆಪಿಸಿಸಿ ತರಬೇತುದಾರಾದ ಶಶಿಧರ್ ಮಾಸ್ಟರ್ ಹಾಗೂ ಚೇತನ್ ಮಾಹಿತಿಯನ್ನು ನೀಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ ಎಸ್. ಮಹಮ್ಮದ್. ಮಾತನಾಡಿ ಪ್ರತಿಯೊಬ್ಬ ಬಿ. ಎಲ್. ಏ ಪ್ರತಿ ಮತದಾರರ ಮನೆಗೆ ತೆರಳಿ ಸರಿಯಾದ ಮಾಹಿತಿಯನ್ನು ನೀಡಿ ಯಾವುದೇ ಮತದಾರರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಕನಿಷ್ಠ ವೇತನ ಸಲಹಾ ಸಮಿತಿ ರಾಜ್ಯ ಅಧ್ಯಕ್ಷರಾದ ಟಿ ಎಂ ಶಾಹಿದ್ ರವರು ಮಾತನಾಡಿ ಮಾನ್ಯ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪಕ್ಷ ಸಂಘಟನೆ ಜೊತೆಗೇ ಜನಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ನಾನು ಕೂಡ ನನ್ನ ಉಸ್ತುವಾರಿ ವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದರು
ಕರ್ನಾಟಕ ಅರೆ ಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ. ಸೂಡಾ ಅಧ್ಯಕ್ಷರಾದ ಮುಸ್ತಫಾ. ಪ್ರದಾನ ಕಾರ್ಯದರ್ಶಿ ಭವಾನಿ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ 5 ಗ್ರಾಮಗಳ ಪ್ರಮುಖರಾದ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕೆ ಪಿ. ಜಾನಿ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹಮ್ಮದ್ ಕುoಞಿ ಸಂಪಾಜೆ ರಾಜೀವ್ ಗಾಂಧಿ ಸಂಘಟನೆಯ ಜಯಪ್ರಕಾಶ್ ನೆಕ್ರಪ್ಪಾಡಿ, ಮಹೇಶ್ .ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಿ ಕೆ ಹಮೀದ್ ಗೂನಡ್ಕ. ಸುಂದರಿ ಮುಂದಡ್ಕ ಸುಮತಿ ಶಕ್ತಿವೇಲು ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ವಿಜಯ ಕುಮಾರ್. ವಿಮಲಾ ಪ್ರಸಾದ್. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜ್ಞಾನ ಶಿಲಾನ್ , ಪ್ರಮೀಳಾ ಪೆಲ್ತಡ್ಕ. ಸಂಪಾಜೆ ಕಾರ್ಮಿಕ ಮುಖಂಡ ಪ್ರಸಾದ್. ತೊಡಿಕಾನ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಗಳಾದ ತಿಮ್ಮಯ್ಯ, ರವೀಂದ್ರ ಪೂಜಾರಿ. ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರಾದ. ಯಶವಂತ ಸೂಟಿ ಗದ್ದೆ . ಅರಂತೋಡು ಗ್ರಾಮ ಸಮಿತಿಯ ಜುಬೈರ್ ಕೆಪಿಸಿಸಿ ಲೀಗಲ್ ಸೆಲ್ ನ ಮೂಸಾ ಕುಂಞಿ ಪೈಂಬಾಚಲ್ ರಾಧಾಕೃಷ್ಣ. ಬಾಲಕೃಷ್ಣ ರೈ ಅರಂತೋಡು ಜಯಪ್ರಕಾಶ್ ಮೇರ್ಕಜೆ ಸೈಪುದಿನ್ ಪಟೇಲ್. ಸಾಜಿದ್. ಅಣ್ಣಾದೊರೈ ಬಾಲಕೃಷ್ಣ ಕುಂಟುಕಾಡು ಅಬೂಬಕ್ಕರ್ ಪಾರೆಕಲ್ ಮೊದಲಾದವರು ಉಪಸ್ಥಿತರಿದ್ದರು
ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸಂಪಾಜೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್ ಕೆ. ಹನೀಫ್ ಸ್ವಾಗತಿಸಿ ಬ್ಲಾಕ್ ಕಾಂಗ್ರೆಸ್ ಮುಖಂಡ ಅಶ್ರಫ್ ಗುಂಡಿ ವಂದಿಸಿ. ಬ್ಲಾಕ್ ಪ್ರದಾನ ಕಾರ್ಯದರ್ಶಿ ಭವಾನಿ ಶಂಕರ್ ಕಾರ್ಯಕ್ರಮ ನಿರೂಪಿಸಿದರು



















































































































Leave a Comment

Your email address will not be published. Required fields are marked *

error: Content is protected !!
Scroll to Top