ಅರಂತೋಡು ಸಮಸ್ತ ಸ್ಥಾಪನಾ ದಿನ ಆಚರಣೆ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ಇದರ ಆಶ್ರಯದಲ್ಲಿ “ಆದರ್ಶ ಪರಿಶುದ್ಧತೆ ಶತಮಾನಗಳಲ್ಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸಮಸ್ತ ಸ್ಥಾಪನಾ ದಿನವನ್ನು ಜೂ.26 ರಂದು ಅರಂತೋಡು ಮಸೀದಿ ವಠಾರದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಸಂದೇಶ ಭಾಷಣವನ್ನು ಖತೀಬರಾದ ಬಹು| ಆಸಿಫ್ ಅಝ್ಹರಿ ಮಾತನಾಡಿ ಸಯ್ಯದ್ ವರಕ್ಕಲ್ ಮುಲ್ಲಕೋಯ ತಂಗಳ್, ಅಹ್ಮದ್ ಕುಟ್ಟಿ ಮುಸ್ಲಿಯಾರ್, ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್, ಇ.ಕೆ ಅಬೂಬಕ್ಕರ್ ಮುಸ್ಲಿಯಾರ್ ರಂತಹ ಮಹನೀಯರ ಪರಿಶ್ರಮ ಮತ್ತು ತ್ಯಾಗದಿಂದದಿಂದ ಕಟ್ಟಿ ಬೆಳೆಸಿದ ಸಮಸ್ತ ಇಂದು ಅತಿ ಎತ್ತರಕ್ಕೆ ಬೆಳೆದಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಮುನ್ನಡೆಯ ಬೇಕೆಂದರು.
ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ ಅಧ್ಯಕ್ಷತೆ ವಹಿಸಿದರು. ವಿಕಾಯ ಸದಸ್ಯ ತಾಜುದ್ಧೀನ್ ಅರಂತೋಡು ಸ್ವಾಗತಿಸಿದರು. ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಝುಹರಿ, ಎ.ಹೆಚ್. ವೈ.ಎ ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ, ಎಸ್.ಕೆ ಎಸ್.ಎಸ್.ಎಫ್ ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಆಶಿಕ್ ಕುಕ್ಕುಂಬಳ, ಮುಝಮ್ಮಿಲ್ ಕುಕ್ಕುಂಬಳ, ಇಸಾಕುದ್ಧೀನ್, ಸಾಬಿತ್ ಹುದವಿ, ಹಮೀದ್ ಎ ಮೊದಲಾದವರು ಉಪಸ್ಥಿತರಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top