ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆದು ನಿರ್ಣಾಯಿಸಿ ಸರಕಾರಕ್ಕೆ ಬರೆಯಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಪಿ.ಡಿ.ಒ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು
ಹಾಗೂ ಸದಸ್ಯರಾದ ಕೆ. ದೇವಪ್ಪ ಗೌಡ ಮನವಿ ಸಲ್ಲಿಸಿದ್ದಾರೆ.
ರೈತಾಪಿ ವರ್ಗದ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೂರ್ವಜರಿಂದ ಬಂದಂತಹ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸರಕಾರಗಳು ಬಡ ಕೃಷಿಕರ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆಯಲು ಕಸ್ತೂರಿರಂಗನ್ ಎಂಬ ಅವೈಜ್ಞಾನಿಕವಾದ ವಿಜ್ಞಾನಿಯ 7ನೇ ಕರಡು ಅದಿಸೂಚನೆಯಲ್ಲಿ ಗ್ರಾಮೀಣ ಜನರ ಬದುಕಿನ ಮೂಲ ಸೌಕರ್ಯಗಳಿಗೆ ಕಡವಾಣ ಹಾಕಲು ತಯಾರಿ ನಡೆಸಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘವು ವಿರೋಧಿಸುತ್ತದೆ ಮತ್ತು ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಮತ್ತು ಈ ವರದಿಯನ್ನು ತಿರಸ್ಕರಿಸಲು ಕೂಡಲೇ ತಾವುಗಳು ವಿಶೇಷ ಗ್ರಾಮ ಸಭೆಯನ್ನು ಕರೆದು ಈ ವರದಿಯನ್ನು ಗ್ರಾಮ ಸಭೆಯಲ್ಲಿ ತಿರಸ್ಕರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆಯಲು ರೈತ ಸಂಘದಿಂದ ಮನವಿ













