ಅರಂತೋಡು : ನಾಡಪ್ರಭು ಕೆಂಪೇ ಗೌಡರ 517 ನೇ ಜಯಂತಿ ಆಚರಣೆ

ಅರಂತೋಡು : ನಾಡ ಪ್ರಭು ಕೆಂಪೇ ಗೌಡರು ಬೆಂಗಳೂರನ್ನು ಕಟ್ಟಿದ ಓರ್ವ ಉತ್ತಮ ಆಡಳಿತಗಾರ ಈ ನಿಟ್ಟಿನಲ್ಲಿ ಕೆಂಪೇ ಗೌಡರು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸುಳ್ಯ ತಾಲೂಕು
ರಾಜ್ಯ ಒಕ್ಕಲಿಗರ ಸಂಘ (ರಿ.) ಬೆಂಗಳೂರು,ಇವರ ಸಹಕಾರದೊಂದಿಗೆ ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ,
ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಆರಂತೋಡು, ಅರಂತೋಡು ಗ್ರಾಮ ಗೌಡ ಸಮಿತಿ ಹಾಗೂ ಮಹಿಳಾ ಸಮಿತಿಗಳ ನೇತೃತ್ವದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನಾಚರಣೆಯ ಪ್ರಯುಕ್ತ
ಉಪನ್ಯಾಸ ಹಾಗೂ ನಾಡಪ್ರಭು ‘ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂಪೇ ಗೌಡರ ಕಾಲದ ಆಡಳಿತದಲ್ಲಿ ಅವರು ಮಾಡಿಕೊಂಡ ವಿಶೇಷ ವ್ಯವಸ್ಥೆಗಳು ಜನರಿಗೆ ಪೂರಕವಾಗಿತ್ತು.ಕೆಂಪೇ ಗೌಡರ ಓರ್ವ ಅಸಮಾನ್ಯ ವ್ಯಕ್ತಿ.ಸುಳ್ಯ ತಾಲೂಕಿನಲ್ಲಿ ಗೌಡ ಸಮುದಾಯದವರೇ ಹೆಚ್ಷು ಇರುವ ಇಲ್ಲಿ ಮುಂದಿನ ವರ್ಷ ಇನ್ನಷ್ಟು ಹೆಚ್ಚು ಜನರನ್ನು ಸೇರಿಸುವ ಕೆಲಸ ನಡೆಯಬೇಕು ಎಂದು ಹೇಳಿದರು
ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ
ಟಿ. ಎಂ. ಶಹೀದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆಂಪೇ ಗೌಡರು ಓರ್ವ ಅಪ್ರತಿಮ ಆಡಳಿತ ಗಾರನಾಗಿದ್ದು ಬೆಂಗಳೂರನ್ನು ಕಟ್ಟಿ ಬೆಳೆಸಿದರು ಎಂದು ಹೇಳಿದರು.
ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರ ದ. ಕ. ಜಿಲ್ಲಾ ಅಧ್ಯಕ್ಷ
ಭರತ್ ಮುಂಡೋಡಿ,
ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಾಫ,
ಗ್ಯಾರಂಟಿ ಯೋಜನಾ ಪ್ರಾಧಿಕಾರ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು,ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ‌ ಸಂಚಾಲಕ ಎ. ಸಿ. ವಸಂತ
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಪ್ರಾಂಶುಪಾಲ ರಮೇಶ್ ಎಸ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಶೇರ್ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳಾದ ಎಂ.ಮೀನಾಕ್ಷಿ ಗೌಡರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಪ್ರೌಢ ಶಾಲಾ ಶಿಕ್ಷಕಿ
ಚಂದ್ರಮತಿ ಕೆ.ಉಪನ್ಯಾಸ ನೀಡಿದರು. ತಹಶಿಲ್ದಾರ್ ಮಂಜುಳ ಮಾತನಾಡಿದರು.ಆರ್.ಐ ಅವಿನ್ ರಂಗತ್ ಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನ್ಯಾಯವಾದಿ ದಿನೇಶ್ ಮಡಪ್ಪಾಡಿ ಪ್ರಶಸ್ತಿ ಪುರಸ್ಕೃತರಾದ ಪರಿಚಯ ಮಾಡಿದರು.ಸುಳ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ ಸ್ವಾಗತಿಸಿದರು.
ಸಹಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.
ಗೌಡರ ಯುವ ಸಂಘ ಸುಳ್ಯದ ಕಾರ್ಯದರ್ಶಿ, ತೀರ್ಥರಾಮ ಅಡ್ಕಬಳೆ ವಂದಿಸಿದರು





















































































































Leave a Comment

Your email address will not be published. Required fields are marked *

error: Content is protected !!
Scroll to Top