ಭಾರತೀಯ ಮಜ್ದೂರ್ ಸಂಘ (BMS ) 71ನೇ ಸ್ಥಾಪನಾ ದಿನಾಚರಣೆಯನ್ನು ಕಲ್ಲುಗುಂಡಿ ಘಟಕದಲ್ಲಿ ತಾಯಿ ಭಾರತಂಭೆಗೆ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.
ಸಂಘದ ಅದ್ಯಕ್ಷ ಜಗದೀಶ್ ಗೂನಡ್ಕ ಶುಭ ಹಾರೈಸಿದರು.
ಸಂಘದ ಸ್ಥಾಪಕರಾದ ದತ್ತೊಪಂತ್ ಠೇಂಗಡಿ ಅವರ ಜೀವನ ಚರಿತ್ರೆ ಮತ್ತು ಸಂಘ ನಡೆದು ಬಂದ ಹಾದಿ ಬಗ್ಗೆ ಮತ್ತು ಸಂಘಟನೆ ಎಂದರೇನು? ಸಾಮಾಜಿಕ ಕ್ಷೇತ್ರದಲ್ಲಿ ನಂಘದ ಸದಸ್ಯರ ಪಾಲ್ಗೋಳ್ಳುವಿಕೆ ಬಗ್ಗೆ ನಿಕಟ ಪೂರ್ವ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರು ಸಭೆಯಲ್ಲಿ ಸೇರಿದ ಸದಸ್ಯರುಗಳಿಗೆ ತಿಳಿಸಿದರು.
ವಿಶೇಷವಾಗಿ ಎಲ್ಲಾ ಸದಸ್ಯರುಗಳಿಗೆ ಸಂಘದ ಸದಸ್ಯ ದಿವಾಕರ ದೊಡ್ಡಡ್ಕ ಅವರು ಸಿಹಿ ತಿಂಡಿ ವಿತರಿಸಿದರು.
ಜಗದೀಶ್ ಕೊಯನಾಡು ಅವರು ಸ್ವಾಗತಿಸಿ.ಚಂದ್ರಶೇಖರ ಪೆರಂಗೋಡಿ ವಂದಿಸಿದರು.
ಕಲ್ಲುಗುಂಡಿ : ಭಾರತೀಯ ಮಜ್ದೂರ್ ಸಂಘ (BMS ) 71ನೇ ಸ್ಥಾಪನ ದಿನಾಚರಣೆ





































































