ಸಂಪಾಜೆ ಗ್ರಾಮದ ಮಾಣಿ ಮೈಸೂರಯ ರಾಷ್ಟ್ರೀಯ ಹೆದ್ದಾರಿ ಕಲ್ಲುಗುಂಡಿ ಬಾಲೆಂಬಿ ತಿರುವಿನಲ್ಲಿ ಭಾರೀ ಮಳೆಗೆ ಮೋರಿಯ ಬಳಿ ರಸ್ತೆ ಹಾಗೂ ಸ್ಲಾಬ್ ಕುಸಿದಿದ್ದು ವಾಹನ ಸವಾರರಿಗೆ ಅಪಾಯ ಎದುರಾಗಿದೆ.
ಈ ರಸ್ತೆ,ಬಾಲೆಂಬಿ,ದಬ್ಬಡ್ಕ,ಕಾಂತಬೈಲು,ಚೆಂಬು,ಕುದುರೆಪಾಯ ಇತರ ಕಡೆ ಸಂಪರ್ಕ ಕಲ್ಪಿಸುತ್ತದೆ. ದಿನ ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರಿಸುತ್ತವೆ.
ಇದನ್ನು ತಕ್ಷಣ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಲ್ಲುಗುಂಡಿ -ಬಾಲೆಂಬಿ ಸಂಪರ್ಕ ರಸ್ತೆ ಕುಸಿತ













