ಅರೆಭಾಷೆ ಇಂದು ಜಾತಿ ಧರ್ಮವನ್ನು ಮೀರಿ ಬೆಳೆದಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವರ ಆಶ್ರಯದಲ್ಲಿ ಪಂಜ ದೇವಳದ ಸಭಾವನದಲ್ಲಿ ಆ.9ರಂದು ನಡೆದ ಆಟಿ ನೆಂಪು 2026 ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರೆಭಾಷೆ ಎಲ್ಲಾ ಜಾತಿ ಧರ್ಮವನ್ನು ಮೀರಿ ಬೆಳೆದಿರುವುದು ಈ ಭಾಷೆಯ ವಿಶೇಷತೆ ಅರೆಭಾಷೆ ಸಂಸ್ಕೃತಿ ಮತ್ರು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿನಾಡು ಉತ್ಸವ,ಅರೆಭಾಷೆ ಜಂಬರ,ಆಟಿ ನೆಂಪು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಅರೆಭಾಷೆ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ನಿವ್ರತ್ತ ಕನ್ನಡ ಶಿಕ್ಷಕಿ ಚಂದ್ರಮತಿಯವರು ಮಾತನಾಡಿ ನಮ್ಮ ಆಚರಣೆ ಸಂಪ್ರದಾಯಗಳ ಹಿಂದೆ ಸಾಕಾಷ್ಟು ಅರ್ಥಗಳಿವೆ.ಮೂಡನಂಬಿಕೆಗಳಲ್ಲ.ಆಟಿ ಕಳಂಜ ದುಷ್ಟ ಶಕ್ತಿಯನ್ನು ಓಡಿಸುವ ಕೆಲಸ ಮಾಡುತ್ತದೆ ಎಂಬ ನಂಬಿಕೆಯಿದ್ದು ಇದು ದೈವರಾಧನೆಯ ಸಂಕೇತ.ನಮ್ಮ ಮೂಲ ನಂಬಿಕೆ ಆಚರಣೆ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಯುವಜನತೆ ಮಾಡಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು ಎಂದು ಹೇಳಿದರು.
ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಪಂಜ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಜೆ.ಸಿ ಭಾಗ್ಯೇಶ್ ರೈ,ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜೆ.ಸಿ ಅಧ್ಯಕ್ಷ, ದೇವಿಪ್ರಸಾದ್ ಚಿಕ್ಕುಮುಳಿ,ಕಾರ್ಯದರ್ಶಿ ಪ್ರಕಾಶ್ ಆಳ್ಪೆ, ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ, ಪಂಜ ಲಯನ್ಸ ಕ್ಲಬ್ ಅಧ್ಯಕ್ಷ ಆನಂದ ಜಳಕದ ಹೊಳೆ,ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ,ಅಕಾಡೆಮಿ ಸದಸ್ಯರಾದ ಡಾ.ಜಾನೇಶ್,ಕಾರ್ಯಪ್ಪ,ಲತಾಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆರಾಧ್ಯ ಆಶಯ ಗೀತೆ ಹಾಡಿದರು.
ಅರೆಭಾಷೆ ಇಂದು ಜಾತಿ ಧರ್ಮವನ್ನು ಮೀರಿ ಬೆಳೆದಿದೆ : ಸದಾನಂದ ಮಾವಜಿ













