ಗೌಡ ಯುವ ಸೇವಾ ಸಂಘ ಸುಳ್ಯ,ಗೌಡ ಗ್ರಾಮ ಸಮಿತಿ , ತರುಣ ಘಟಕ ,ಮಹಿಳಾ ಘಟಕ ವತಿಯಿಂದ ಈ ವರ್ಷದ ಆಟಿ ಗೌಜಿ ಕಾರ್ಯಕ್ರಮವನ್ನು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ ನಡೆಯಿತು. ಆಟಿ ಗೌಜಿ ಕಾರ್ಯಕ್ರಮವನ್ನು ನಿವೃತ ಶಿಕ್ಷಕರಾದ ಹೊನ್ನಪ್ಪ ಮಾಸ್ಟರ್ ಆಡ್ತಲೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ, ಕಾರ್ಯದರ್ಶಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು, ಮಹಿಳಾ ಘಟಕದ ಅಧ್ಯಕ್ಷರಾದ ವಾರಿಜಾ ಕುರುಂಜಿ, ತರುಣ ಘಟಕದ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು, ತಾಲೂಕು ಮಹಿಳಾ ಘಟಕದ ನಿರ್ದೇಶಕರಾದ ಪುಷ್ಪಾ ಮೇದಪ್ಪ ಉಳುವಾರು, ಭಾರತಿ ಪುರುಷೋತ್ತಮ ಉಳುವಾರು ಉಪಸ್ಥಿತರಿದ್ದರು.
ಕೃಪಾ ದಿನೇಶ್ ಅಡ್ಕಬಳೆ ಆಟಿ ಮಹತ್ವವನ್ನು ತಿಳಿಸಿದರು.
ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ ಗೌಡ,ತಾಲೂಕು ತರುಣ ಘಟಕದ ಅಧ್ಯಕ್ಷರಾದ ಪ್ರೀತಮ್. ಡಿ. ಕೆ., ದೈಹಿಕ ಶಿಕ್ಷಕರಾದ ವಸಂತ ಮಾಸ್ಟರ್ , ನಿವೃತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ, ಆಟಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಶ್ರೀ ಗೋಪಾಲಕೃಷ್ಣ ಕಾಟೂರು ಮಾಲಿನಿ ವಿನೋದ್ ಉಳುವಾರು, ಕು. ಜ್ಯೋತಿ ಬೆದ್ರುಪಣೆ ಇವರನ್ನು ಗ್ರಾಮ ಗೌಡ ಸಮಿತಿ ವತಿಯಿಂದ ಗುರುತಿಸಿ ಗೌರವಿಸಲಾಯಿತು. ಆಟಿ ಗೌಜಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಆಟಿ ಖಾದ್ಯ ತಿನಿಸುಗಳೊಂದಿಗೆ ಮಧ್ಯಾಹ್ನದ ಭೋಜನವನ್ನು ಮಾಡಲಾಯಿತು. ಅರಂತೋಡು ಗ್ರಾಮದ ಎಲ್ಲಾ ಗೌಡ ಬಾಂದವರು ಉಪಸ್ಥಿತರಿದ್ದರು.ದಮಯಂತಿ ಅಡ್ಕಬಳೆ ಪ್ರಾರ್ಥಿಸಿದರು. ಡಾ.ಲಕ್ಷ್ಮೀಶ ಕಲ್ಲುಮುಟ್ಲು ನಿರೂಪಿಸಿದರು. ಪ್ರಮೀಳಾ ಕಿಶೋರ್ ವಂದಿಸಿದರು.
ಅರಂತೋಡು : ಆಟಿ ಗೌಜಿ ಕಾರ್ಯಕ್ರಮ













