ಶಾಲಾ ಬಳಿ ಕಾಡಾನೆಗಳಿರುವ ಶಂಕೆ,ರಜೆ ಘೋಷಣೆ

ಹಲವು ದಿನಗಳಿಂದ ದುಗ್ಗಲಡ್ಕದ ಕಂದಡ್ಕದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಕಳೆದ ರಾತ್ರಿ ಕೊಯಿಕುಳಿ ಶಾಲಾ ಬಳಿಯ ತೋಟಗಳಿಗೆ ನುಗ್ಗಿದ್ದು, ಅಲ್ಲೇ ಇರುವ ಅನುಮಾನವಿರುವುದರಿಂದ ಮುಂಜಾಗ್ರತೆಗಾಗಿ ಕೊಯಿಕುಳಿ ಶಾಲೆಗೆ ಆ.10ರಂದು ಶಾಲೆಗೆ ರಜೆಗೆ ಘೋಷಿಸಲಾಗಿದೆ.
ಆ.9ರಂದು ರಾತ್ರಿ ನೀರಬಿದಿರೆ ಡಾ.ಗಣೇಶ್ ಭಟ್, ಶಂಭಯ್ಯ ಪಾರೆ, ಸುರೇಶ್ಚಂದ್ರ ಕಮಿಲ, ಕೇಶವಯ್ಯ ಪಾರೆ, ಜನಾರ್ದನ ಗೌಡ, ವಾಸುದೇವ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿರುವುದಾಗಿ ತಿಳಿದುಬಂದಿದ್ದು, ಅಲ್ಲೇ ಕಾಡಿನಲ್ಲಿ ಇರುವುದಾಗಿ ಶಂಕಿಸಲಾಗಿದೆ.ಕಾಡಾನೆಗಳ ಸಮಸ್ಯೆ ದಿನದಿಂದ ಹೆಚ್ಚುತ್ತಿದ್ದರೂ ಸರಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top