ಜಾಲ್ಸೂರು : ಒಕ್ಕೂಟ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಸುಳ್ಯ ತಾಲೂಕು ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳು ಒಕ್ಕೂಟ ಜಾಲ್ಸೂರು ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ರುದ್ರಹೋಮ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜಾಲ್ಸೂರು ವಲಯದ ವಲಯಾಧ್ಯಕ್ಷರಾದ ಶ್ರೀ ದಯಾನಂದ ಗುಡ್ಡೆಮನೆಯವರ ಘನ ಅಧ್ಯಕ್ಷತೆಯಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನ ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಬಡವರ ಪಾಲಿನ ಕಲ್ಪವೃಕ್ಷವಾಗಿದೆ. ಪೂಜ್ಯರು ಹಾಗೂ ಹೇಮಾವತಿ ಅಮ್ಮನವರ ಆಶ್ರಯದಂತೆ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಬಲೀಕರಣ ಆಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ತಿಳಿಸಿ, ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶ್ರೀವರ ಪಾಂಗಣ್ಣಾಯ ಮಾತನಾಡಿ ಸಾಮೂಹಿಕ ರುದ್ರ ಹೋಮದ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಘನ ಉಪಸ್ಥಿತಿಯಲ್ಲಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ಮಾಧವ ಗೌಡ ರವರು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ,
ಇಂದು ನಾವು ಸಂಭ್ರಮಿಸುತ್ತಿರುವ ಈ ಪದಗ್ರಹಣ ಸಮಾರಂಭದ ಹಿಂದಿರುವ ಆಶಯ ಮತ್ತು ಶಕ್ತಿ ಅಪಾರವಾದದ್ದು. ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕೋಟ್ಯಾಂತರ ಗ್ರಾಮೀಣ ಕುಟುಂಬಗಳ ಬದುಕಿಗೆ ಬೆಳಕಾಗಿದೆ. ಸಣ್ಣ ಉಳಿತಾಯದಿಂದ ತೊಡಗಿ ಇಂದಿನ ಜ್ಞಾನವಿಕಾಸದವರೆಗೆ ಗ್ರಾಮೀಣ ಮಹಿಳೆಯರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ಭದ್ರತೆಯನ್ನು ನೀಡಿದೆ. ಗ್ರಾಮಮಟ್ಟದ ಸ್ವಸಹಾಯ ಸಂಘಗಳು ಒಕ್ಕೂಟಗಳಾಗಿ ರೂಪಗೊಂಡು ನಾಯಕತ್ವವನ್ನು ಬೆಳೆಸುವ ದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ.
ನಮ್ಮ ನಮ್ಮ ಗ್ರಾಮಗಳಲ್ಲಿ ಸೋತಂತಹ ಕುಟುಂಬಗಳನ್ನು ಆರ್ಥಿಕ ಸಬಲೀಕರಣ ಮಾಡುವಲ್ಲಿ ಒಕ್ಕೂಟದ ಪದಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಸುಳ್ಯ ತಾಲೂಕಿನ ಎಲ್ಲಾ ವಲಯಗಳಿಂದ ಜಾಲ್ಸೂರು ವಲಯ ಉತ್ತಮವಾಗಿದೆ ಎಂದು ಗುರುತಿಸಿದರು. ಸಂಪೂರ್ಣ ಸುರಕ್ಷಾ, ಕ್ರಿಟಿಕಲ್ ಪಂಡ್, ಸುಜ್ಞಾನಿಧಿ. ಜಲಮಂಗಲ ಕಾರ್ಯಕ್ರಮ, ವಾಟರ್ ಬೆಡ್, ವೀಲ್ ಚೇರ್, ನಿರ್ಗತಿಕರಿಗೆ ವಾಸ್ತಲ್ಯ ಮನೆ, ವಾತ್ಸಲ್ಯ ಕಿಟ್ ಗಳನ್ನು ಯೋಜನೆ ಮುಖಾಂತರ ತಲುಪಿಸಲಾಗುತ್ತಿದೆ.
ಇಂದಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೆರೆದಿರುವ ಅತೀ ಹೆಚ್ಚು ಜನಸಂಖ್ಯೆ ನೋಡಿದಾಗ ನೀವು ಯೋಜನೆಯ ಬಗ್ಗೆ ಇಟ್ಟಿರುವ ನಂಬಿಕೆ ವಿಶ್ವಾಸ ಪ್ರೀತಿ ಈ ಜಾಲ್ಸೂರು ವಲಯದ ಒಕ್ಕೂಟಗಳ ಒಗ್ಗಟ್ಟಿಗೆ ಯಶಸ್ವಿಗೆ ಕಾರಣವಾಗಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಸುರೇಶ್ ಕಣೆಮರಡ್ಕ ಅಧ್ಯಕ್ಷರು ಕೇಂದ್ರ ಒಕ್ಕೂಟ ಪ್ರಗತಿ ಬಂದು ಸ್ವಸಹಾಯ ಸಂಘಗಳು ಒಕ್ಕೂಟ ಸುಳ್ಯ ತಾಲೂಕು, ಮಾತನಾಡಿ ಉಳಿದ ಬ್ಯಾಂಕ್ ಸೇವೆಗಳಿಗೆ ಹೋಲಿಸಿದರೆ ಈ ಯೋಜನೆಯಲ್ಲಿ ಶೀಘ್ರ ಸಾಲ ಮಂಜೂರಾತಿ, ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಲು ಯೋಜನೆ ಸಹಕಾರಿಯಾಗಿದ್ದು, ಯೋಜನೆಯ ಅಭಿವೃದ್ಧಿ ಹಾದಿಯನ್ನು ನೆನೆಸಿಕೊಂಡು.
ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿದ್ದ ಶ್ರೀ ವೆಂಕಪ್ಪ ಗೌಡ ಅಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.) ಸುಳ್ಯ ತಾಲೂಕು ಮಾತನಾಡಿ ಕಾರ್ಯಕ್ರಮದ ಸಭೆಯಲ್ಲಿನ ಶಿಸ್ತು, ಸಂಯಮ, ಸಮಯ ಪಾಲನೆ ಸೇರಿರುವ ಹೆಚ್ಚಿನ ಜನಸಂಖ್ಯೆಯನ್ನು ಪ್ರಶಂಸಿಸಿದರು. ಯೋಜನೆಯಿಂದ ಮಹಿಳಾ ಸಬಲೀಕರಣ, ಸಾಮಾಜಿಕ ಜನಜಾಗೃತಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಿದ್ದು, ದೇಶ ಅಭಿವೃದ್ಧಿಯಾಗಬೇಕಾದರೆ ಗ್ರಾಮ ಮಟ್ಟದಲ್ಲಿ ವಿಕಸನವಾಗಬೇಕು, ಪ್ರಧಾನಿಯವರ ವಿಕಸಿತ ಭಾರತದ ಕನಸನ್ನು ನಾವೆಲ್ಲರೂ ಸಾಕಾರಗೊಳಿಸಬೇಕು ಅಂತೆಯೇ ಸರಕಾರದ ವಿವಿಧ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುವಂತವರಾಗಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಶ್ರೀಮತಿ ರಂಜಿತಾ ಪಿ ಉಪವಲಯ ಅರಣ್ಯ ಅಧಿಕಾರಿ ಜಾಲ್ಸೂರು, ಪುತ್ತೂರು ವಲಯ ಮಾತನಾಡಿ ಮಹಿಳೆಯ ಮಾನಸಿಕ ಸ್ಥರ್ಯಕ್ಕೆ ಒಕ್ಕೂಟಗಳು ಶಕ್ತಿ ನೀಡಿದ್ದು, ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುವವರನ್ನು ಶ್ರೀ ಮಂಜುನಾಥ ಸ್ವಾಮಿ ಪೋಷಿಸುತ್ತಾರೆ ಹಾಗೆಯೇ ಸ್ವತಃ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳಿಂದ ಶಿಕ್ಷಣ ಪಡೆದ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಗಳಾದ ಶ್ರೀಹರಿಪ್ರಕಾಶ್ ಅಡ್ಕಾರು ಮಾತನಾಡಿ ಯೋಜನೆಯ ಆಶ್ರಯದಲ್ಲಿ ನಡೆಯುವ ಭಜನಾ ತರಬೇತಿ ಹಾಗೂ ಇತರ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿದ್ದ ಶ್ರೀ ಭಾಸ್ಕರ ಅಡ್ಕಾರು, ವಲಯ ಅಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸೂರು ವಲಯ, ಇವರು ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಸಬಲೀಕರಣ ಸದೃಢ ಸಮಾಜದ ನಿರ್ಮಾಣ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮಾದಕ ವಸ್ತುಗಳ ನಿರ್ಮೂಲನೆ ಮುಂತಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು.
ಶ್ರೀ ವಾಸುದೇವ ಪೆರುಂಬಾರು, ಪ್ರಧಾನ ಅರ್ಚಕರು ಮಾಡಿಮಾಳು ಮುಖ ದುರ್ಗಾಪರಮೇಶ್ವರಿ ದೇವಸ್ಥಾನ ಇವರು ಮಾತನಾಡಿ ಯೋಜನೆಯಿಂದ ಸಿಕ್ಕ ಅನುಭವ ಹಾಗೂ ಸೌಲಭ್ಯಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ದಯಾನಂದ ಗುಡ್ಡಮನೆ ವಲಯ ಅಧ್ಯಕ್ಷರು ಪ್ರಗತಿ ಬಂದು ಸ್ವಸಹಾಯಗಳ ಒಕ್ಕೂಟ ಜಾಲ್ಸೂರು ವಲಯ ಇವರು ಮಾತನಾಡಿ, ನಾನು ಎಂಬ ಅಹಂ ಇಲ್ಲದೆ ನಾವು ಎಂಬ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಕಷ್ಟಪಟ್ಟು ಕಲಿತ ವಿದ್ಯೆ ಕಷ್ಟಪಟ್ಟು ದುಡಿದ ಹಣ ಎಂದಿಗೂ ವ್ಯರ್ಥವಾಗಿ ಹೋಗುವುದಿಲ್ಲ, ಯೋಜನೆಯ ಒಕ್ಕೂಟದ ಬೆಳವಣಿಗೆ ಅತ್ಯಂತ ಶ್ರದ್ಧೆಯಿಂದ ಶ್ರಮಿಸಿದ್ದು ಸೇವೆಯ ಅವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಕೊನೆಯದಾಗಿ ವಂದನಾರ್ಪಣೆಯನ್ನು ಗಿರಿಧರ ಗೌಡ ಅಧ್ಯಕ್ಷರು, ಸೊಣಂಗೇರಿ ಒಕ್ಕೂಟ ಜಾಲ್ಸೂರು ವಲಯ ನೆರವೇರಿಸಿದರು.

























Leave a Comment

Your email address will not be published. Required fields are marked *

error: Content is protected !!
Scroll to Top