August 2026

ಭಾರತೀಯ ಮಜ್ದೂರ್ ಸಂಘ ಆಟೋ ಚಾಲಕರಿಂದ ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ನಿರ್ಮಿಸುವಂತೆ ಮನವಿ

ಸುಳ್ಯ ತಾಲೂಕಿನ ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿ ಚಾರ್ಜಿಂಗ್ ಕೇಂದ್ರ ಅಳವಡಿಸುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಅನುಕೂಲವಾಗುವ ದೃಷ್ಟಿ ಯಿಂದ ಸಂಘದಿಂದ ಮಾನ್ಯ ಶಾಸಕರಿಗೆ ಮತ್ತು ಮಾನ್ಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮೆಸ್ಕಾಂ ಸುಳ್ಯ ಇಂಜಿನಿಯರ್ ಹರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ. ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಜಂಟಿ ಕಾರ್ಯದರ್ಶಿ ಸುರೇಂದ್ರ

ಭಾರತೀಯ ಮಜ್ದೂರ್ ಸಂಘ ಆಟೋ ಚಾಲಕರಿಂದ ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ನಿರ್ಮಿಸುವಂತೆ ಮನವಿ Read More »

ಸುಳ್ಯ ಬಿಎಂಎಸ್ ಆಟೋ ರಿಕ್ಷಾ ಚಾಲಕರಿಂದ ಸುಳ್ಯ ನಗರದ ರಸ್ತೆ ಚರಂಡಿ ದುರಸ್ತಿ ಮಾಡಿಸುವಂತೆ ಶಾಸಕರಿಗೆ ಮನವಿ

ದ.ಕ. ಜಿಲ್ಲಾ ಸುಳ್ಯ ತಾಲೂಕಿನ ಸುಳ್ಯ ನಗರ ವ್ಯಾಪ್ತಿಯ ಸಾರ್ವಜನಿಕರು ಉಪಯೋಗಿಸುವ ರಸ್ತೆಗಳು ಕೆಟ್ಟು ಹೋಗಿದ್ದು ಇದನ್ನು ದುರಸ್ತಿ ಪಡಿಸುವಂತೆ ಸುಳ್ಯ ತಾಲೂಕು ಸುಳ್ಯ ಬಿಎಂಎಸ್ ಅಟೋ ರಿಕ್ಷಾ ಚಾಲಕರ ಸಂಘ ಸುಳ್ಯ ಶಾಸಕಿಯರಿಗೆ ಮನವಿ ಸಲ್ಲಿಸಿದೆ.ರಸ್ತೆಯ ಇಕ್ಕಡೆಗಳ ನೀರು ಹೋಗುವ ಕಣಿ ದುರಸ್ತಿ ಮಾಡದೆ ಇದ್ದು, ಅಲ್ಲದೇ ಬೆಳೆದ ಕಾಡು ಬಲ್ಲೆಗಳಿಂದ ರಸ್ತೆಯು ಕಿರಿದಾಗಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನವನ್ನು ಚಲಾಯಿಸಲು ಆಟೋ ರಿಕ್ಷಾ ಚಾಲಕರಿಗೆ ತೊಂದರೆ ಆಗಿರುತ್ತದೆ.ಮೇಲೆ ನಮೂದಿಸಿದ ವಿಷಯದ ಕುರಿತು ಹಲವಾರು ಬಾರಿ

ಸುಳ್ಯ ಬಿಎಂಎಸ್ ಆಟೋ ರಿಕ್ಷಾ ಚಾಲಕರಿಂದ ಸುಳ್ಯ ನಗರದ ರಸ್ತೆ ಚರಂಡಿ ದುರಸ್ತಿ ಮಾಡಿಸುವಂತೆ ಶಾಸಕರಿಗೆ ಮನವಿ Read More »

ಪಂಜ ದೇವಸ್ಥಾನ: ಸಭೆ ಕರೆದು ಗೊಂದಲಗಳಿಗೆ ಸ್ಪಷ್ಟನೆ ನೀಡಲಾಗುವುದು : ಡಾ| ದೇವಿಪ್ರಸಾದ್

ಪಂಜ : ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆಚಾರ-ವಿಚಾರ, ಸಾಲ-ಲೆಕ್ಕಪತ್ರ, ನಿಶ್ಚಿತ ಠೇವಣಿ, ಸಿಬಂದಿ ವಜಾ, ತೋಟದ ಗುತ್ತಿಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಭಕ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಉದ್ದೇಶದಿಂದ ಸಾರ್ವಜನಿಕ ಸಭೆ ಕರೆದು ಮಾಹಿತಿ ನೀಡುವಂತೆ ಭಕ್ತರ ನಿಯೋಗವೊಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮನವಿ ಸಲ್ಲಿಸಿದೆ.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸಾವಿರ ಸೀಮೆಯ ಭಕ್ತಾದಿಗಳ ಹೆಸರಿನಲ್ಲಿ ಸಲ್ಲಿಸಲಾದ ಮನವಿ ಪತ್ರವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ। ದೇವಿಪ್ರಸಾದ್

ಪಂಜ ದೇವಸ್ಥಾನ: ಸಭೆ ಕರೆದು ಗೊಂದಲಗಳಿಗೆ ಸ್ಪಷ್ಟನೆ ನೀಡಲಾಗುವುದು : ಡಾ| ದೇವಿಪ್ರಸಾದ್ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ವಿಧಿ ಹಾಗೂ 2021-22 ಸಾಲಿನ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಸಮಾರಂಭ ಕಾರ್ಯಕ್ರಮವು ಆಗಸ್ಟ್ 03 ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಸಭಾಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ಆರೋಗ್ಯದಲ್ಲಿನ ಆಯುರ್ವೇದ ವೈದ್ಯರುಗಳ ಮಹತ್ವ ಅಂತೆಯೇ ದೇಶದ ಏಳಿಗೆಯಲ್ಲಿ ಯುವ ಜನಾಂಗದ ಪ್ರಾಮುಖ್ಯತೆಯನ್ನು ತಿಳಿಸಿದರು.ಮುಖ್ಯ ಅತಿಥಿಗಳಾಗಿ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ. Read More »

ಪಂಜ : ಸ್ವಚ್ಚತಾ ಕಾರ್ಯಕ್ರಮ

ಒಡಿಯೂರು ಶ್ರೀಗಳ ಹುಟ್ಟು ಹಬ್ಬದ ಪ್ರಯುಕ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಆ.2ರಂದು ಕುತ್ಕುಂಜ ಘಟ ಸಮಿತಿ ವತಿಯಿಂದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ವನ್ನು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ರವರು ದೀಪ ಬೆಳಗಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಂಜ ವಲಯದ ಸಂಯೋಜಕರಾದ ಜಯಶ್ರೀ ಪಂಬೆತ್ತಾಡಿ, ಗ್ರಾಮದ ಸೇವಾದೀಕ್ಷಿತೆಯಾದ ಸವಿತಾ ನಾಗತೀರ್ಥ, ಘಟ ಸಮಿತಿ ಪದಾಧಿಕಾರಿಗಳಾದ ಕುಮದಾಕ್ಷಿ. ಶೋಭಾ.

ಪಂಜ : ಸ್ವಚ್ಚತಾ ಕಾರ್ಯಕ್ರಮ Read More »

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದು ದಿನ’ ಕಾರ್ಯಕ್ರಮ

ಸುಳ್ಯ: ಆಟಿ ತಿಂಗಳ ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅರಂಬೂರು ಘಟಕ ಗೌಡ ಸಮಿತಿ ಹಮ್ಮಿಕೊಂಡಿದ್ದ “ಆಟಿಲಿ ಒಂದು ದಿನ” ಕಾರ್ಯಕ್ರಮವು ಅರಂಬೂರು ಶ್ರೀ ಮೂಕಾಂಬಿಕ ಭಜನಾ ಮಂದಿರದ ಸಭಾಂಗಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರರಾದ ಶ್ರೀ ಕೆ. ಕೆ. ಶಿವಪ್ಪ ಮಾಂಬುಳಿಯವರು ಉದ್ಘಾಟಿಸಿ ಮಾತನಾಡಿ, “ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಸಮಾಜದ ಜೀವಾಳವಾಗಿವೆ. ಆಟಿ ತಿಂಗಳ ಆಚರಣೆಗಳು ಪ್ರಕೃತಿ, ಆರೋಗ್ಯ ಹಾಗೂ ಕುಟುಂಬದ

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದು ದಿನ’ ಕಾರ್ಯಕ್ರಮ Read More »

ಮನೆಯ ಹಿಂಬದಿಯ ಬರೆ ಕುಸಿತೊಂಡು ಮನೆಗೆ ಹಾನಿ

ಕಳೆದ ಮೂರು ದಿವಸಗಳಿಂದು ಸುಳ್ಯ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ತೊಡಿಕಾನ ಗ್ರಾಮದ ಮುಪ್ಪಸೇರು ಸಣ್ಣಮನೆ ಶ್ರೀಧರ ಅವರ ಮನೆಯ ಹಿಂಬದಿಯ ಬರೆ ಕುಸಿತಗೊಂಡು ಮನೆಗೆ ಹಾನಿ ಸಂಭಸಿದ ಘಟನೆ ವರದಿಯಾಗಿದೆ.

ಮನೆಯ ಹಿಂಬದಿಯ ಬರೆ ಕುಸಿತೊಂಡು ಮನೆಗೆ ಹಾನಿ Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳು ಆಗಸ್ಟ್‌ 4 ರಂದು ದ.ಕ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

6 ಜನ ಭಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ ದೇಹಲಿ ಪೊಲೀಸರು!

ಡಬಲ್-ಎಂಟ್ರಿ ವೀಸಾದ ಷರತ್ತುಗಳನ್ನು ಉಲ್ಲಂಘಿಸಿ ಅನುಮತಿ ಪಡೆದ ಅವಧಿಯನ್ನು ಮೀರಿ ಉಳಿದುಕೊಂಡಿದ್ದಕ್ಕಾಗಿ ದೆಹಲಿ ಪೊಲೀಸರು 6 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.ಕೇಂದ್ರ ದೆಹಲಿಯಲ್ಲಿ ಪರಿಶೀಲನೆಯ ಭಾಗವಾಗಿ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳ ತಪಾಸಣೆಯ ಸಮಯದಲ್ಲಿ 6 ಜನರನ್ನು ಬಂಧಿಸಲಾಯಿತು. ನಂತರ ಅವರನ್ನು ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅವರ ವೀಸಾಗಳು ಮತ್ತು ವಲಸೆ ದಾಖಲೆಗಳ ಪರಿಶೀಲನೆಯು ಅವರ ವೀಸಾಗಳು ಮಾನ್ಯವಾಗಿದ್ದರೂ, ಪ್ರತಿ ಭೇಟಿಯು ಗರಿಷ್ಠ 15 ದಿನಗಳ ವಾಸ್ತವ್ಯವನ್ನು ಅನುಮತಿಸುತ್ತದೆ. ಆದರೆ ಅನುಮತಿಯನ್ನು ಮೀರಿ ಅವರು ಇಲ್ಲೇ

6 ಜನ ಭಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ ದೇಹಲಿ ಪೊಲೀಸರು! Read More »

ಅಜ್ಜಾವರ : ಧನಲಕ್ಷ್ಮೀ ಮಹಿಳಾ ಮಂಡಲ ವತಿಯಿಂದ ಆಟಿ ಆಚರಣೆಯ  ಸಂಭ್ರಮ ಕಾರ್ಯಕ್ರಮ

ಅಜ್ಜಾವರ ಧನಲಕ್ಷ್ಮಿ ಮಹಿಳಾ ಮಂಡಲ(ರಿ) ಇದರ ವತಿಯಿಂದ ಆಗಸ್ಟ್ 3, 2026ರಂದು ಶ್ರೀ ಶಂಕರ ಭಾರತೀ ವೇದಪಾಠ ಶಾಲೆ, ಅಜ್ಜಾವರದಲ್ಲಿ   ಆಟಿ ಆಚರಣೆ – 2026 ಕಾರ್ಯಕ್ರಮ ನಡೆಯಿತು.  ಮಹಿಳಾ ಮಂಡಲದ ಅಧ್ಯಕ್ಷೆ ವಿಮಲಾರುಣ  ಪಡ್ಡoಬೈಲು ಅಧ್ಯಕ್ಷತೆ ವಹಿಸಿದ್ದರು.ಮಹಿಷ ಮರ್ದಿನೀ ದೇವಸ್ಥಾನದಧರ್ಮದರ್ಶಿ ಎ. ಭಾಸ್ಕರ ರಾವ್ ಬಯಂಬು ಉದ್ಘಾಟಿಸಿ ಮಾತನಾಡಿ   ಆಟಿ ತಿಂಗಳ ವೈಶಿಷ್ಟ್ಯತೆ ಬಗ್ಗೆ  ಮಾತನಾಡಿದರು.ಸಿ.ಆರ್.ಪಿ ಮಮತ ರವೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಬಳಿಕ ಮಾತನಾಡಿದ ಅವರುಆಟಿಯ ಮಹತ್ವದ ಕುರಿತಾಗಿ ಹಾಗೂ ಪ್ರೀತಿ, ಶ್ರದ್ಧೆ, ಭಕ್ತಿ  ಇದ್ದರೆ ನಮ್ಮ ಎಲ್ಲಾ ಕಾರ್ಯಗಳು ಯಶಸ್ಸನ್ನು  ಪಡೆಯುತ್ತದೆ. ಎನ್ನುವ

ಅಜ್ಜಾವರ : ಧನಲಕ್ಷ್ಮೀ ಮಹಿಳಾ ಮಂಡಲ ವತಿಯಿಂದ ಆಟಿ ಆಚರಣೆಯ  ಸಂಭ್ರಮ ಕಾರ್ಯಕ್ರಮ Read More »

error: Content is protected !!
Scroll to Top