ಆ.9ಕ್ಕೆ ಪಂಜದಲ್ಲಿ ಆಟಿ ನೆಂಪು ಕಾರ್ಯಕ್ರಮ
ಆ.9ಕ್ಕೆ ಪಂಜದಲ್ಲಿ ಆಟಿ ನೆಂಪು ಕಾರ್ಯಕ್ರಮ Read More »
ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಆಗಸ್ಟ್ 23 ಹಾಗೂ 24ರಂದು ಕೆಲವು ಪ್ರಮುಖ ಧಾರ್ಮಿಕ ಸೇವೆಗಳು ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವುದರಿಂದ, ಈ ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆಗಳನ್ನು ಜರುಗಿಸುವುದಿಲ್ಲ. ಎಂದಿನಂತೆ ಶ್ರೀ ದೇವರ ದರ್ಶನ, ಮಂಗಳಾರತಿ, ಅರ್ಚನೆ ಮತ್ತು ಮಹಾಪೂಜೆ ಸೇರಿದಂತೆ ಉಳಿದೆಲ್ಲ ನಿತ್ಯ ಪೂಜೆಗಳು
ಆಗಸ್ಟ್ 23 ಮತ್ತು 24ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಪ್ರಮುಖ ಸೇವೆಗಳು ಇಲ್ಲ Read More »
ಮಂಗಳೂರು: ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜನರ ಬಹು ವರ್ಷಗಳ ಬಹುದೊಡ್ಡ ರೈಲ್ವೆ ಬೇಡಿಕೆ ಈಡೇರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ಐತಿಹಾಸಿಕ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಮಂಗಳೂರು ಭಾಗದ
ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ; ದ.ಕ.ದ ಬಹುಕಾಲದ ಬೇಡಿಕೆ ಈಡೇರಿಕೆ Read More »
ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಪದ್ಮಯ್ಯ ರವರು ಹೃದಯಾಘಾತದಿಂದ ನಿಧನರಾದರು.ಅವರಿಗೆ 71 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ತೇಜಾವತಿ, ಪುತ್ರಿ ಸರಿತಾ ರಾಮಕೃಷ್ಣ, ಪುತ್ರರಾದ ವಿನಯ, ಸುಮಿತ್ರ, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪೆರುಮುಂಡ ಪದ್ಮಯ್ಯ ಗೌಡ ನಿಧನ Read More »
ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಬೆಳ್ಳಿಯ ವಾಚ್, ರಕ್ಷಾ ಬಂಧನ ಅನಾವರಣ ಕಾರ್ಯಕ್ರಮ ಆ.21 ರಂದು ನಡೆಯಿತು. ಅತಿಥಿಗಳಾಗಿ ಸೀಮಾ ಆರ್ಟ್ಸ್ ನ ಮಾಲಕರಾದ ಶ್ರೀಮತಿ ರೂಪಶ್ರೀ ಜೆ. ರೈ, ಸೂಂತೋಡು ಎಂಪೋರಿಯಂ ಮಾಲಕಿ ಶ್ರೀಮತಿ ನಳಿನಿ ಸೂರಯ್ಯ, ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಸೇರಿ ವರಮಹಾಲಕ್ಷ್ಮೀ ದೇವಿಗೆ ದೀಪ ಬೆಳಗಿಸಿ , ಆರತಿ ಬೆಳಗಿದರು.ಬಳಿಕ
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನೂತನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೆ.ಎಚ್ ಮುನಿಯಪ್ಪ ಅವರನ್ನು ಭೇಟಿಯಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳಿಗೆ 10ಕೋಟಿ ರೂ ವಿಶೇಷ ಅನುದಾನವನ್ನು ಒದಗಿಸುವಂತೆ ಮನವಿ ಸಲ್ಲಿಸಿದರು . ಸುಳ್ಯ ಅಂಬೇಡ್ಕರ್ ಭವನದ ಅಂದಾಜು ಪಟ್ಟಿಯು ಸರಕಾರಕ್ಕೆ ಸಲ್ಲಿಕೆಯಾಗಿ 2ತಿಂಗಳಾಗಿದ್ದು ಇನ್ನು ಅನುಮೊದನೆಯಾಗಿಲ್ಲ ಅದನ್ನು ಶೀಘ್ರವೇ ಅದನ್ನು ಅನುಮೊದನೆಗೊಳಿಸಿ ಅಂಬೇಡ್ಕರ್ ಭವನದ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ತಿಳಿಸಿದರು, ಶಾಸಕರ ಮನವಿಗೆ ಸಕಾರಾತ್ಮಕವಾಗಿ
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆದು ನಿರ್ಣಯಿಸಿ ಸರಕಾರಕ್ಕೆ ಬರೆಯಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಪಿ.ಡಿ.ಒ ಜಯಪ್ರಕಾಶ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು ಹಾಗೂ ಅರಂತೋಡು ತೊಡಿಕಾನ ಗ್ರಾಮದ ರೈತರು ಮನವಿ ಸಲ್ಲಿಸಿದ್ದಾರೆ.ರೈತಾಪಿ ವರ್ಗದ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೂರ್ವಜರಿಂದ ಬಂದಂತಹ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸರಕಾರಗಳು ಬಡ ಕೃಷಿಕರ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆಯಲು
ಕಸ್ತೂರಿರಂಗನ್ ಅಂತಿಮ ವರದಿಯ ಕರಡು ಪ್ರತಿಗೆ ಒಕ್ಕೊರಲಿನಿಂದ ಆಕ್ಷೇಪಣೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಬಾಧಿತ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರ ಜಿಲ್ಲಾ ಮಟ್ಟದ ಸಭೆ ಗುರುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಬೆಳ್ತಂಗಡಿ, ಕಡಬ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಕಸ್ತೂರಿರಂಗನ್ ವರದಿಯಿಂದ ಬಾಧಿತವಾಗಬಹುದಾದ ಪ್ರದೇಶಗಳ ಗ್ರಾಮಮಟ್ಟದ ಪ್ರಮುಖರು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿ, ವರದಿಯಿಂದ ಮಲೆನಾಡು ಮತ್ತು ಪಶ್ಚಿಮ ಘಟ್ಟದ
ವರಮಹಾಲಕ್ಷ್ಮೀ ಪೂಜೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸುವ ಪ್ರಮುಖ ಹಿಂದೂ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ರವಾರದಂದು ಲಕ್ಷ್ಮೀ ದೇವಿಯನ್ನು ಪೂಜಿಸಿ, ಕುಟುಂಬದ ಸುಖ, ಸಮೃದ್ಧಿ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುವುದು ಈ ಹಬ್ಬದ ವಿಶೇಷತೆ.ಪೂಜೆಯ ವಿಶೇಷತೆಪುರಾಣದ ನಂಬಿಕೆಯ ಪ್ರಕಾರ, ವರಮಹಾಲಕ್ಷ್ಮೀ ದೇವಿಯ ಆರಾಧನೆಯಿಂದ ಅಷ್ಟಲಕ್ಷ್ಮಿಯರ ಕೃಪೆ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ ಸೇರಿದಂತೆ ವಿವಿಧ ರೂಪಗಳಲ್ಲಿ ಲಕ್ಷ್ಮೀ ದೇವಿಯನ್ನು ಸ್ಮರಿಸಲಾಗುತ್ತದೆ.ಹಬ್ಬದ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ಪೂಜಾ ಸ್ಥಳವನ್ನು
ವರಮಹಾಲಕ್ಷ್ಮೀ ಪೂಜೆ – ವಿಶೇಷತೆ ಮತ್ತು ಮಹತ್ವ Read More »
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಆ 20 ರಂದು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ರಸ್ತೆ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ ದಮಯಂತಿ ಸೋಮಯ್ಯರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ.ಹೆಚ್ಚಿನ ಅಪಘಾತಗಳಿಗೆ ನಮ್ಮ ನಿರ್ಲಕ್ಷ್ಯವೇ ಕಾರಣ, ರಸ್ತೆ ಸುರಕ್ಷತೆ
ಅರಂತೋಡು : ರಸ್ತೆ ಸುರಕ್ಷತೆ ಕುರಿತು ಕಾನೂನು ಅರಿವು ಕಾರ್ಯಕ್ರಮ Read More »