ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಬೆಳ್ಳಿಯ ವಾಚ್, ರಕ್ಷಾ ಬಂಧನ ಅನಾವರಣ ಕಾರ್ಯಕ್ರಮ ಆ.21 ರಂದು ನಡೆಯಿತು.
ಅತಿಥಿಗಳಾಗಿ ಸೀಮಾ ಆರ್ಟ್ಸ್ ನ ಮಾಲಕರಾದ ಶ್ರೀಮತಿ ರೂಪಶ್ರೀ ಜೆ. ರೈ, ಸೂಂತೋಡು ಎಂಪೋರಿಯಂ ಮಾಲಕಿ ಶ್ರೀಮತಿ ನಳಿನಿ ಸೂರಯ್ಯ, ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಸೇರಿ ವರಮಹಾಲಕ್ಷ್ಮೀ ದೇವಿಗೆ ದೀಪ ಬೆಳಗಿಸಿ , ಆರತಿ ಬೆಳಗಿದರು.
ಬಳಿಕ ಮಾತನಾಡಿದ ಶ್ರೀಮತಿ ರೂಪಶ್ರೀಯವರು ” ಹಬ್ಬಗಳಲ್ಲಿ ಅತ್ಯಂತ ಮಹತ್ವ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವುದಕ್ಕೆ ಇಂದಿನ ಮಹಾಲಕ್ಷ್ಮೀ ಪೂಜೆ ಸಾಕ್ಷಿಯಾಗಿದೆ. ಇದು ಅಷ್ಟ ಲಕ್ಷ್ಮೀಯರ ಪೂಜೆ , ಕೇವಲ ಸಂಪತ್ತು ಮಾತ್ರವಲ್ಲದೆ ಆಯುಷ್ಯ , ಆರೋಗ್ಯ, ಸಮೃದ್ಧಿ , ಪ್ರಗತಿಯೊಂದಿಗೆ ಲಕ್ಷ್ಮೀ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುವ ಹಬ್ಬವಾಗಿದೆ. ವಿಶೇಷವಾಗಿ ಇಂದು ಸ್ವರ್ಣಂ ಜ್ಯುವೆಲ್ಸ್ ತಂಡ ಇದೀಗ 2 ನೇ ವರ್ಷಕ್ಕೆ ಪಾದಾಪರ್ಣಗೊಳ್ಳುತ್ತಿದ್ದು, ಗ್ರಾಹಕರಿಗೆ ಪ್ರಾಮಾಣಿಕತೆಯಿಂದ ಅತ್ಯತ್ತಮ ಸೇವೆ ಮಾಡುವುದರ ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಪ್ರಾಪ್ತಿಯನ್ನು ದೇವರು ನೀಡಿದ್ದಾರೆ. ಇದರಿಂದ ಇತರ ಸಂಸ್ಥೆಗಳು ಕೂಡ ನಮ್ಮ ಸಾಂಪ್ರದಾಯಿಕ ಆಚರಣೆಗಳ ಕಾರ್ಯಕ್ರಮಗಳನ್ನು ಮಾಡುವಂತಾಗಲಿ. ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಸಂಸ್ಥೆಯ ಉನ್ನತಿಗೆ ಪಸರಿಸಿ ಅಭಿವೃದ್ಧಿಯನ್ನು ನೀಡಲಿ ಎಂದು ಶುಭಹಾರೈಸಿದರು. ಬಳಿಕ ನೂತನ ಬ್ರಾಂಡೆಡ್ ಬೆಳ್ಳಿಯ ವಾಚ್ ಮತ್ತು ಬೆಳ್ಳಿಯ ರಕ್ಷಾ ಬಂಧನ ಅನಾವರಣಗೊಳಿಸಲಾಯಿತು. ಸಂಸ್ಥೆಯ ವತಿಯಿಂದ ಆಗಮಿಸಿದ ಮಹಿಳೆಯರಿಗೆ ಅರಶಿಣ, ಕುಂಕುಮ, ರವಿಕೆ ಕಣ ಸಿಹಿತಿಂಡಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ ಕೆ, ಲೋಕೇಶ್ ಎಂ.ಎಸ್, ಭವಿತ್ ಯು, ಶ್ರೀಮತಿ ಅಶ್ವಿನಿ ಪ್ರವೀಣ್, ಶ್ರೀಮತಿ ಷಡಾಕ್ಷರಿ, ಕು.ವಾಮಿಕ, ಕು. ಹಿತಾ , ಸಿಬ್ಬಂದಿ ಶೋಧನ್, ಗ್ರಾಹಕರಾದ ಶೋಭಾ , ಹರಿಣಿ , ಶ್ರೀಮತಿ ಭವಿತ, ಕು. ಹರ್ಷಿತಾ , ಕು. ವಾಂಚಿತ, ಪವಿತ್ರ, ಪ್ರೇಮಲತಾ, ಅಭಿಜ್ಞಾ, ಸುನಿತಾ , ಹಿತೈಷಿಗಳು ಉಪಸ್ಥಿತರಿದ್ದರು.
















