ಬಸ್ ಘಟಕದಲ್ಲಿ ಬಸ್‌ಗಳು ಹಾಗೂ ಸಿಬ್ಬಂದಿಗಳ ಕೊರತೆ ಇರುವುದರಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಆದ್ದರಿಂದ ಸುಳ್ಯ ಬಸ್ ಘಟಕಕ್ಕೆ 10 ಹೊಸ ಬಸ್‌ಗಳನ್ನು ಮತ್ತು ಚಾಲಕ ಮತ್ತು ನಿರ್ವಾಹಕರನ್ನು ನೇಮಿಸಬೇಕೆಂದು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಸಾರಿಗೆ ಸಚಿವರಿಗೆ ಮನವಿಯಲ್ಲಿ ಕೋರಿದ್ದಾರೆ .ಅದಕ್ಕೆ ಪ್ರತಿಯಾಗಿ ಸಚಿವರು ಇನ್ನು6 ತಿಂಗಳಿನಲ್ಲಿ ಸರಕಾರಕ್ಕೆ ಹೊಸಬಸ್ಸುಗಳು ಹಸ್ತಾಂತರವಾಗಲಿದ್ದು ನಂತರ ಬಸ್ಸುಗಳನ್ನು ಮತ್ತು ಸಿಬಂದಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸುಳ್ಯ ಬಸ್ ಘಟಕಕ್ಕೆ ನೂತನ ಬಸ್ ಒದಗಿಸುವಂತೆ ಸಾರಿಗೆ ಸಚಿವರಿಗೆ ಸುಳ್ಯ ಶಾಸಕರ ಮನವಿ




















