ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಯಾಗಿ 31 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿ ನಮ್ಮನ್ನಗಲಿದ ಪುಷ್ಪಾವತಿ ಯವರಿಗೆ ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ಶ್ರದ್ದಾಂಜಲಿ ಸಭೆ ಆಯೋಜಿಸಲಾಯಿತು
ಅಧ್ಯಕ್ಷತೆಯನ್ನು ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶಹನಾಜ್ ವಹಿಸಿದ್ದರು
ಗಾಂಧಿನಗರ ಕೆ ಪಿ ಎಸ್ ಸ್ಕೂಲ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಭವಾನಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು
ಭಾವ ಚಿತ್ರಕ್ಕೆ ಎಲ್ಲರೂ ಪುಷ್ಪ ನಮನ ಸಲ್ಲಿಸಿದ ನಂತರ ನುಡಿ ನಮನ ಸಲ್ಲಿಸಿದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಾತನಾಡಿ, ಬಡತನ ದಲ್ಲೂ ಹೃದಯ ಸಿರಿವಂತಿಕೆ ಹೊಂದಿದ ಪುಷ್ಪಾವತಿಯವರು ನಿಸ್ವಾರ್ಥ ಸೇವೆ ಯ ಮೂಲಕ ಎಲ್ಲರನ್ನು ಪ್ರೀತಿಸಿದ ಸ್ನೇಹ ಜೀವಿ, ಅವರು ನಿವೃತ್ತಿ ಯ ದಿನದ ಬೀಳ್ಕೊಡುಗೆ ಬಗ್ಗೆ ಅಪಾರ ಸಂತಸದಿಂದ ಹೇಳುತ್ತಿದ್ದರು ನಿವೃತ್ತಿ ಯ ಅಂಚಿ ನಲ್ಲಿ ಇಹ ಲೋಕ ವನ್ನು ತ್ಯಜಿಸಿರುವ ಕರ್ಮ ಜೀವಿ ಪುಷ್ಪಕ್ಕ ರ ಅಗಲುವಿಕೆ ಅಪಾರ ನೋವು ತಂದಿದೆ ಎಂದರು, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ,
ನಗರ ಪಂಚಾಯತ್ ಮಾಜಿ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಸಿ ಡಿ ಪಿ ಒ ಕಚೇರಿ ಮೇಲ್ವಿಚಾರಕಿ ಉಷಾ, ಜೈ ಭಾರತ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಮಜೀದ್ ಕೆ ಬಿ
ಎಸ್. ಎಂ ಹನೀಫ್ ಬುಶ್ರಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಆರೋಗ್ಯ ಇಲಾಖೆಯ ಕನಕಾoಗಿ,ಉದ್ಯಮಿ ಶರವಣ್ ರಾಮ್, ಸ್ತ್ರೀ ಶಕ್ತಿ ಸದಸ್ಯೆ ತಾಹಿರ, ಮೊದಲಾದವರು ಉಪಸ್ಥಿತರಿದ್ದರು
ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ ವಂದಿಸಿದರು.
ಅಗಲಿದ ಗಾಂಧಿನಗರ ಅಂಗನವಾಡಿ ಸಹಾಯಕಿ ಪುಷ್ಪಾವತಿ ಯವರಿಗೆ ಸಾರ್ವಜನಿಕಶ್ರದ್ದಾಂಜಲಿ ಸಭೆ, ನುಡಿ ನಮನ

























