ಈ ಬಾರಿಯ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮವು ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಅದರ ಪೂರ್ವಭಾವಿ ಸಭೆಯು ಸೆ.28 ರಂದು ಮಂಡೆಕೋಲಿನ ಅಮೃತ ಸಹಕಾರ ಭವನದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಸಪ್ತಾಹ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಆ ಬಳಿಕ ಸಭೆಯ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟಿ, ಉದಯಕುಮಾರ್ ಆಚಾರ್, ಜನಾರ್ಧನ ಬರೆಮೇಲು, ಚಂದ್ರಜಿತ್ ಮಾವಂಜಿ, ರಾಮಚಂದ್ರ ಮಾಸ್ತರ್, ಪದ್ಮನಾಭ ಚೌಟಾಜೆ, ಶೇಖರ ಮಣಿಯಾಣಿ, ಉತ್ತಪ್ಪ ಗೌಡ, ವಿಪಿನ್ ನಂಬ್ಯಾರ್ ಅನಿಸಿಕೆ ವ್ಯಕ್ತಪಡಿಸಿದರು.
ವೇಧಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶಿವಪ್ರಸಾದ್ ಉಗ್ರಾಣಿಮನೆ, ರಾಮಕರಷ್ಣ ರೈ ಪೇರಾಲುಗುತ್ತು, ಉಪಾಧ್ಯಕ್ಷರಾದ ಪುರುಷೋತ್ತಮ ಕಾಡುಸೊರಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ .ಜಿ, ನಿರ್ದೇಶಕರುಗಳಾದ ಕೇಶವಮೂರ್ತಿ ಹೆಬ್ಬಾರ್, ಲಿಂಗಪ್ಪ ಗೌಡ ಬದಿಕಾನ, ಲಕ್ಷ್ಮಣ ಉಗ್ರಾಣಿಮನೆ, ಶಶಿಧರ ಕಲ್ಲಡ್ಕ, ಆಶಿಕ್ ದೇವರಗುಂಡ, ಜಯಶ್ರೀ ಚೌಟಾಜೆ, ಸದಾನಂದ ಮಡಿವಾಳಮೂಲೆ, ರಾಜಣ್ಣ ಪೇರಾಲುಮೂಲೆ, ಉಮೇಶ್ ಮಂಡೆಕೋಲು, ತುಳಸಿನಿ ದೇವರಗುಂಡ ಉಪಸ್ಥಿತರಿದ್ದರು.
ಲಕ್ಷ್ಮಣ ಯು.ಯಂ ಸ್ವಾಗತಿಸಿ ಕೇಶವಮೂರ್ತಿ ವಂದಿಸಿದರು. ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.











