ಜೇಸಿಐ ಸುಳ್ಯ ಪಯಸ್ವಿಗೆ ಅರೋಹಣ -2026 ತರಬೇತಿ ಸಮ್ಮೇಳನದಲ್ಲಿ ಟಾಪ್ 4ನೇ ಘಟಕದೊಂದಿಗೆ ಹಲವು ಪ್ರಶಸ್ತಿಗಳ ಮನ್ನಣೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು 2026ರಲ್ಲಿ ವಿವಿಧ ತರಬೇತಿ ಕಾರ‍್ಯಕ್ರಮಗಳ ಆಯೋಜನೆಯಲ್ಲಿ ಸಾಧನೆ ಮೆರೆದಿದ್ದು, ಸಪ್ಟಂಬರ್ 27ರಂದು ಮಂಗಳೂರಿನ ಪಾಲೇಮಾರ್ ಕನ್ವರ್ಸನ್ ಹಾಲ್ ನಲ್ಲಿ ನಡೆದ ಜೇಸಿಐ ಭಾರತ ವಲಯ-15ರ ಅರೋಹಣ ತರಬೇತಿ ಸಮ್ಮೇಳನ – 2026”ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ.











































ವಲಯ ಮಟ್ಟದಲ್ಲಿ ತರಬೇತಿ ವಿಭಾಗದಲ್ಲಿ ಘಟಕದಿಂದ ಆಯೋಜಿಸಿದ ತರಬೇತಿ ಕಾರ್ಯಕ್ರಮಗಳಲ್ಲಿ 4ನೇ ಸ್ಥಾನವಾಗಿ ಹೊರಹೊಮ್ಮಿದ್ದಲ್ಲದೇ ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಅಭಿಯಾನ ತರಬೇತಿ ಕಾರ್ಯಾಗಾರ,
ಘಟಕ ಮಟ್ಟದ ಇ. ಪಿ. ಎಸ್ ಕಾರ್ಯಾಗಾರ, ಜೆ. ಎ. ಎಪ್, ತರಬೇತಿ, ಎಂಪವರಿಂಗ್ ಯೂತ್, ಪ್ಯೂಚರ್ ಟ್ರೈನಿಂಗ್ ತರಬೇತಿ ಕಾರ್ಯಕ್ರಮಗಳನ್ನು ಗುರುತಿಸಿ ಘಟಕಕ್ಕೆ
ಹಲವು ಪ್ರಶಸ್ತಿ ಪುರಸ್ಕಾರಗಳು ದೊರೆತಿರುತ್ತದೆ.
ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷರಾದ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ ಹಾಗೂ ತರಬೇತಿ ಕೋ-ಆರ್ಡಿನೇಟರ್ ಜೇಸಿಐ ಸೆನೆಟರ್ ದೀಪಕ್ ರಾಜ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೊಂಟಡ್ಕ ಹಾಗೂ ಪೂರ್ವಾಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರು, ಸದಸ್ಯರಾದ ಜೇಸಿ. ಶೋಭಾ ಅಶೋಕ್ ಚೂಂತಾರು, ಜೇಸಿ ಉಮೇಶ್ ಬೊಳುಗಲ್ಲು, ಜೇಸಿ. ವಿನೋದ್ ಮೂಡಗದ್ದೆ, ಸಾಮಾಜಿಕ ಮುಖಂಡ ಸುಪ್ರೀತ್ ಮೋಂಟಡ್ಕ ತಂಡದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಅಲ್ಲದೇ ಈ ಸಂದರ್ಭದಲ್ಲಿ ತರಬೇತಿ ಸಮ್ಮೇಳನ 2026ಕ್ಕೆ ಹೆಸರನ್ನು ಸೂಚಿಸಿದ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರಿಗೆ ವಿಶೇಷ ಮನ್ನಣೆಯನ್ನು ನೀಡಿ ವಲಯಾಧ್ಯಕ್ಷರು ಗೌರವಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top