ಮರ್ಕಂಜ : ಕುಣಿತ ಭಜನೆ ಸಂಸ್ಕಾರ ಶಿಬಿರ ಉದ್ಘಾಟನೆ

ಮರ್ಕಂಜ, ಸೆ. 28: ಯುವಶಕ್ತಿ ಮಿತ್ರ ಬಳಗ (ರಿ.) ದಾಸರಬೈಲು, ಮರ್ಕಂಜ ಇದರ ವತಿಯಿಂದ ಸಂಸ್ಕಾರ ಶಿಬಿರ ಹಾಗೂ ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಸೆ. 27ರಂದು ಬೆಳಿಗ್ಗೆ 9 ಗಂಟೆಗೆ ಮರ್ಕಂಜದ ಅಂಬೇಡ್ಕರ್ ಭವನದ ಹೊರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಂಜುನಾಥೇಶ್ವರ ಭಜನಾ ಪರಿಷತ್‌ನ ಸುಳ್ಯ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ ಉದ್ಘಾಟಿಸಿ, ಶುಭ ಹಾರೈಸಿದರು.
ಕುಣಿತ ಭಜನಾ ತರಬೇತಿಯನ್ನು ಆನಂದ ಬಳ್ಪ ಅವರು ನೀಡಿದರು. ಪ್ರತಿ ಆದಿತ್ಯವಾರ ಸಂಜೆ ತರಬೇತಿ ನಡೆಯಲಿದ್ದು, ಯುವಜನರಲ್ಲಿ ಧಾರ್ಮಿಕ ಸಂಸ್ಕಾರ ಹಾಗೂ ಭಜನಾ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಯುವಶಕ್ತಿ ಮಿತ್ರ ಬಳಗದ ಸರ್ವ ಸದಸ್ಯರು ಕುಣಿತ ಭಜನಾ ತಂಡಕ್ಕೆ ಶುಭ ಹಾರೈಸಿದರು.











































Leave a Comment

Your email address will not be published. Required fields are marked *

error: Content is protected !!
Scroll to Top