ಸುಳ್ಯ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.), ಬಿಎಂಎಸ್ ಸಂಯೋಜಿತ ಸಂಘಟನೆಯ ವತಿಯಿಂದ ನ.28ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ 27ನೇ ವರ್ಷದ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು
ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ. ಹಾಗೂ ಸಂಘದ ಹಿರಿಯ ಸದಸ್ಯ ವಿಶ್ವನಾಥ ಅಡ್ಪಂಗಯ ನಂಜುಂಡ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಲೋಕಕಲ್ಯಾಣಾರ್ಥವಾಗಿ ಹಾಗೂ ಸಂಘದ ಸರ್ವ ಸದಸ್ಯರು ಮತ್ತು ಹಿತೈಷಿಗಳ ಶ್ರೇಯೋಭಿವೃದ್ಧಿಗಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಭಾಸ್ಕರ್ ಐಡಿಯಲ್, ಪೂಜಾರಿ ತಿಮ್ಮಪ್ಪ ನಾವೂರು, ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಶಂಕರ, ವೇಣುಗೋಪಾಲ, ಕುರುಂಜಿಭಾಗ್ ಜನಾರ್ದನ, ಶ್ರೀರಾಮ್ ಪೇಟೆ, ರೋಹಿತ್ ಗಾಂಧಿನಗರ, ಸುರೇಶ್ ಕುರುಂಜಿಭಾಗ್, ಜಗದೀಶ್ ಎನ್.ಆರ್., ಚಾಮಯ್ಯ ಮಾರ್ಕೆಟ್ ರಸ್ತೆ, ಲೋಕೇಶ್ ಬಸ್ ನಿಲ್ದಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.















