ಮಡಿಕೇರಿ ಉದ್ಯಮಿ ಹೆಚ್ ಎಂ ನಂದಕುಮಾರ್ ರವರಿಂದ ಸುಳ್ಯ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ಕೊಡುಗೆ

ಕೆಪಿಸಿಸಿ ಸದಸ್ಯರು ಮತ್ತು ಸಂಯೋಜಕರು ಹಾಗೂ ಮಡಿಕೇರಿ ನಿವಾಸಿ ಉದ್ಯಮಿಗಳಾದ ಹೆಚ್ ಎಂ ನಂದಕುಮಾರ್ ರವರು ಸುಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ (ಟ್ರಾಕ್ ಪ್ಯಾಂಟ್) ಕೊಡುಗೆಯಾಗಿ ನೀಡಿದ್ದಾರೆ.











































































ನ 28 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿಯಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮವಸ್ತ್ರ ವಿತರಿಸಿ ಮಾತನಾಡಿದ ದ. ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿಯವರು, ಕೆಪಿಸಿಸಿ ಸದಸ್ಯ ಹೆಚ್ ಎಂ ನಂದಕುಮಾರ್ ರವರು ಉದ್ಯಮಿಯಾಗಿ, ಕಳೆದ ಅನೇಕ ವರ್ಷಗಳಿಂದ ತಮ್ಮ ಗಳಿಕೆಯ ಒಂದಂಶವನ್ನು ಅಸಾಹಾಯಕರಿಗೆ, ದುರ್ಬಲರಿಗೆ ಸಹಾಯದ ರೂಪದಲ್ಲಿ ನೀಡುತ್ತಾ, ಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದಾರೆ. ಇಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ನೀಡಿ ಮಕ್ಕಳ ಖುಷಿಯಲ್ಲಿ ಪಾಲುದಾರರಾಗಿರುವುದು ಹೆಮ್ಮೆಯ ವಿಚಾರ. ಒಬ್ಬ ಮನುಷ್ಯನಿಗೆ ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ತಮ್ಮ ಸೇವಾ ಮನೋಭಾವನೆಯಿಂದ ಜನರ ಪ್ರೀತಿ ಗಳಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವರ ಸೇವೆ ನಮ್ಮ ತಾಲೂಕಿಗೆ ಇನ್ನು ಮುಂದೆಯೂ ಇರುವಂತಾಗಲಿ ಎಂದು ಹಾರೈಸಿದರು.

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ ಎಸ್ ಗಂಗಾಧರ್ ಮಾತನಾಡಿ ನಂದಕುಮಾರ್ ರವರು ನಮ್ಮ ಕ್ಷೇತ್ರದಾಧ್ಯಂತ ಹಲವಾರು ಸಂಘ ಸಂಸ್ಥೆಗಳಿಗೆ, ಬಡವರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಸರಕಾರಿ ಶಾಲೆಯ ಬಡ ಮಕ್ಕಳಿಗೆ ತಮ್ಮ ಬೇಡಿಕೆಯನ್ನು ಈಡೇರಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್ ಸಂಶುದ್ದಿನ್, ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ಸುಳ್ಯ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ್ ಕಲ್ಮಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ, ಶತಮಾನೋತ್ಸವ ಸಮಿತಿ ಖಜಾಂಜಿ ಶಂಬಯ್ಯ ಪಾರೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಮುಖಂಡ ಚೇತನ್ ಕಜೆಗದ್ದೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಚಂದ್ರನ್ ಕೂಟೇಲು, ಶಹೀದ್ ಪಾರೆ, ನಾರಾಯಣ ಟೈಲರ್, ಭಾಗೀಶ್ ಕೆ ಟಿ, ಶ್ರೀಮತಿ ವಾರಿಜ ಕೊರಗಪ್ಪ, ಶ್ರೀಮತಿ ಶೈಲಜಾ ನೀರಬಿದಿರೆ, ಜಯಂತ್ ಕೊಯಿಕುಳಿ, ಮಂಜುನಾಥ ಮಡ್ತಿಲ, ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಬೆಳ್ಯಪ್ಪ ಗೌಡ ಕೊಡ್ತುಗುಳಿ ಸ್ವಾಗತಿಸಿ, ವಂದಿಸಿದರು. ಕುರಲ್ ತುಳು ಕೂಟ ಅಧ್ಯಕ್ಷ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top