ಯಶಸ್ವಿಯಾಗಿ ನಡೆದ ಸಂಜೀವಿನಿ ಎನ್‌ಆರ್‌ಎಲ್‌ಎಂ – ಕೃಷಿ ಅಧ್ಯಯನ ಪ್ರವಾಸ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಸಂಜೀವಿನಿ ಕೆ.ಎಸ್.ಆರ್‌.ಎಲ್‌.ಪಿ.ಎಸ್ ಸಹಯೋಗದಲ್ಲಿ, ಕೃಷಿ ಇಲಾಖೆ ಮಂಗಳೂರು ತಾಲೂಕು 2025–26ರ ಆತ್ಮ ಯೋಜನೆಯಡಿ ರಾಜ್ಯದೊಳಗಿನ ತರಬೇತಿ ಕಾರ್ಯಕ್ರಮವಾಗಿ ಕೊಪ್ಪಳ ಜಿಲ್ಲೆಗೆ ಕೃಷಿ ಅಧ್ಯಯನ ಪ್ರವಾಸವನ್ನು ಆಯೋಜಿಸಿತು.



































































































7 ಮತ್ತು 8 ಡಿಸೆಂಬರ್ 2025ರಂದು ನಡೆದ ಈ ಪ್ರವಾಸದಲ್ಲಿ ಜಿಲ್ಲಾ ಪಂಚಾಯತ್ ಮಂಗಳೂರು ದ.ಕ ಯೋಜನಾ ನಿರ್ದೇಶಕರು ಶ್ರೀ ಜಯರಾಮ ಕೆ.ಇ, ಸಂಜೀವಿನಿ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀ ಹರಿಪ್ರಸಾದ್ ಗೌಡ, ಕೃಷಿ ಜೀವನೋಪಾಯ ವಿಭಾಗದ ಜಿ.ಎಂ ಶ್ರೀ ವಿನೀತ್, ಫಾರ್ಮ್ ಮ್ಯಾನೇಜರ್‌ಗಳು, ಎಂ.ಬಿ.ಕೆ., ಪಶುಸಖಿ, ಕೃಷಿ ಸಖಿ, ಮಹಿಳಾ ಫಲಾನುಭವಿಗಳು ಹಾಗೂ ಮೂಡುಬಿದಿರೆ ಕೃಷಿ ಇಲಾಖೆಯ ಎಟಿಎಂ ಭಾಗವಹಿಸಿದರು.

ತಂಡವು ಕೊಪ್ಪಳ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಕುಮಾರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಅಂಬಣ್ಣ ಕಟಗಿ ಮತ್ತು ಯಲಬುರ್ಗಾ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಾಶ್ ಅವರೊಂದಿಗೆ ಚರ್ಚೆ ನಡೆಸಿ, ಸ್ಥಳೀಯ ಜೀವನೋಪಾಯ ಮಾದರಿಗಳನ್ನು ಅಧ್ಯಯನ ಮಾಡಿತು.

BV-300 ಕೋಳಿ ಸಾಕಾಣಿಕೆಯ ಯಶೋಗಾಥೆ
ಹೊಸಳ್ಳಿ ಗ್ರಾಮದ ಕಾವೇರಿ ಮಂಜುನಾಥ ಅವರ 500 BV-300 ಕೋಳಿಗಳ ಘಟಕವು ಉತ್ತಮ ನಿರ್ವಹಣೆ ಹಾಗೂ ತಾಂತ್ರಿಕ ಮಾರ್ಗದರ್ಶನದಿಂದ ಯಶಸ್ವಿಯಾಗಿದೆ. ಉತ್ಪಾದನೆಯ ಮೊಟ್ಟೆಗಳನ್ನು ಶಾಲೆಗಳಿಗೆ ಪೂರೈಕೆ ಮಾಡುವ ಮೂಲಕ ಸ್ಥಿರ ಆದಾಯ ವ್ಯವಸ್ಥೆ ನಿರ್ಮಾಣವಾಗಿದೆ.

ತಂಡವು ಮುಧೋಳ ತುಂಗಭದ್ರಾ ಸಂಜೀವಿನಿ ಸ್ವಸಹಾಯ ಸಂಘ ಹಾಗೂ ಶ್ರೀ ವಿರುಪಾಕ್ಷೇಶ್ವರ ಸಂಜೀವಿನಿ ಸಂಘಗಳ ಕೋಳಿ ಸಾಕಾಣಿಕೆ ಘಟಕಗಳನ್ನೂ ವೀಕ್ಷಿಸಿತು.

ಈ ಅಧ್ಯಯನ ಪ್ರವಾಸವು ಗ್ರಾಮೀಣ ಮಹಿಳೆಯ ಆದಾಯವೃದ್ಧಿ, ಸ್ವಾವಲಂಬನೆ ಮತ್ತು ಜೀವನೋಪಾಯ ಚಟುವಟಿಕೆಗಳ ಬಲವರ್ಧನೆಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿತು.

Leave a Comment

Your email address will not be published. Required fields are marked *

error: Content is protected !!
Scroll to Top