ಸುಳ್ಯ: ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ ವಿರುದ್ಧ ನ್ಯಾಯಾಧೀಶರು ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ರಕ್ಷಿತ್ ವಿರುದ್ಧ ಪ್ರತ್ಯೇಕ ಲಘು ಪ್ರಕರಣಗಳು ದಾಖಲಾಗಿದ್ದವು.ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಅವರು ತನಿಖೆ ಪೂರ್ಣಗೊಳಿಸಿ ಮಾನ್ಯ ಎಸ್‌ಸಿಜೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ, ಸುಳ್ಯ ಅವರಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸಿ.ಸಿ. 42/26, 43/26 ಹಾಗೂ 44/26 ಸಂಖ್ಯೆಗಳಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ₹3,000 ದಂಡ ವಿಧಿಸಿದೆ. ಇದಲ್ಲದೆ, ಮೂರು ಪ್ರಕರಣಗಳಿಗೂ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ (ಮಾರ್ಚ್ 15ರಿಂದ 29ರವರೆಗೆ) ಸಮುದಾಯ ಸೇವೆ ನಿರ್ವಹಿಸುವಂತೆ ಆದೇಶಿಸಿದೆ. ಈ ಅವಧಿಯಲ್ಲಿ ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳಿಗೆ ಸಂಬಂಧಿಸಿದ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.ಅದೇ ವೇಳೆ, ಆರೋಪಿಯ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಲು ನ್ಯಾಯಾಲಯ ಆದೇಶಿಸಿದೆ.
ಆಗಾಗ ಸಂಚಾರ ನಿಯಮ ಉಲ್ಲಂಘನೆ,ಆರೋಪಿಯ ಚಾಲನಾ ಪರಾವನಿಗೆ ಮೂರು ತಿಂಗಳು ಅಮಾನತು!

























