ಅರಂತೋಡು ಪುಡ್ ಪಾಯಿಂಡ್ ಹೋಟೆಲ್ ಮುಂಭಾಗ ರಸ್ತೆ ದಾಟುತ್ತಿದ್ದ ವ್ರದ್ದರೊರ್ವರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಸೆ.12ರಂದು ವರದಿಯಾಗಿದೆ.
ಕಾರು ಡಿಕ್ಕಿ ಹೊಡೆದು ಗಾಯಗೊಂಡ ವ್ಯಕ್ತಿಯನ್ನು ಅರಂತೋಡು ಬಿಳಿಯಾರು ಗ್ರಾಮದ ಬಿಳಿಯಾರು ಶೆಟ್ಡಿಯಡ್ಕ ನಿವಾಸಿ ಮುಸ್ತಾಪ ಎಂದು ಗುರುತಿಸಲಾಗಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಾದಯಾರಿಗೆ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದು ಅವರನ್ನು ಅರಂತೋಡು ಸಮ್ರದ್ದಿ ಆಂಬುಲೆನ್ಸ್ ನಲ್ಲಿ ಶರತ್ ಅಡ್ಯಡ್ಕ ಸುಳ್ಯದ ಆಸ್ಪತ್ರೆಗೆ ತಂದರು.ಗಾಯಳವನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಂತೋಡು : ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ
























