ಸುಳ್ಯ ತಾಲೂಕು ಯಾದವ ಯುವ ವೇದಿಕೆ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಸುಳ್ಯ ತಾಲೂಕು ಯಾದವ ಯುವ ವೇದಿಕೆ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮಾರ್ಚ್ 15 ರಂದು ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು.
ಶಿಬಿರವನ್ನು ಕಾಲೇಜಿನ ಡೀನ್ ಡಾ.ನೀಲಾಂಬಿಕೈ ನಟರಾಜನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇಧಿಕೆ ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಡಾ.ಸಂದೇಶ್ ರೈ, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸತ್ಯವತಿ ಆರ್ ಆಳ್ವ, ಬ್ಲಡ್ ಬ್ಯಾಂಕ್ ಅಧಿಕಾರಿಗಳಾದ ಡಾ.ನವ್ಯ ಬಿ.ಎನ್, ಡಾ.ಅಂಜಲಿ ರಾವ್, ತಾಲೂಕು ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಹಿಳಾ ವೇಧಿಕೆ ಅಧ್ಯಕ್ಷೆ ಜಯಾಕೃಷ್ಣ, ಯಾದವ ಸಭಾ ತಾಲೂಕು ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೋಶಾಧಿಕಾರಿ ಕರುಣಾಕರ ಕೇನಾಜೆ, ಕೆ.ವಿ.ಜಿ ಆಸ್ಪತ್ರೆಯ ಸಂಪರ್ಕಾಧಿಕಾರಿ ರಘುಪತಿ ಉಗ್ರಾಣಿಮನೆ, ಯುವ ವೇಧಿಕೆ ಪೂರ್ವಾಧ್ಯಕ್ಷರುಗಳಾದ ಸುರೇಶ್‌ ಕಣೆಮರಡ್ಕ, ಪ್ರಕಾಶ್ ಯಾದವ್, ಕ್ಯಾಪ್ಟನ್ ಸುಧಾನಂದ ಬೆಳ್ಳಾರೆ, ಯುವ ವೇಧಿಕೆ ಕಾರ್ಯದರ್ಶಿ ಪ್ರಣೀತ್ ಕಣಕ್ಕೂರು, ಶ್ರೀಧರ ಮೇನಾಲ, ಯುವ ವೇಧಿಕೆ ಕೋಶಾಧಿಕಾರಿ ತೀರ್ಥೇಶ್ ನಾರ್ಣಕಜೆ, ಜತೆ ಕಾರ್ಯದರ್ಶಿ ಅಶೋಕ್ ಕಿಲಾರ್ಕಜೆ, ಪ್ರಮುಖರಾದ ರೋಹಿತ್ ಬೆಟ್ಟಂಪಾಡಿ, ನಿತೀಶ್ ಸುಳ್ಯ, ಕೆ.ವಿ.ಜಿ ಸಂಸ್ಥೆಯ ಸಿಬ್ಬಂಧಿಗಳು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು. ಸುರೇಶ್ ಕಣೆಮರಡ್ಕ ಸ್ವಾಗತಿಸಿ, ಪ್ರಣೀತ್ ಕಣಕ್ಕೂರು ವಂದಿಸಿದರು.

Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top