ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರೌಢ ಶಾಲಾ ವಿಭಾಗದ ಸಹಶಿಕ್ಷಕ ಚಿನ್ನಪ್ಪ ಗೌಡರು ಸೇವಾ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜು.31ರಂದು ಶಾಲೆಯಲ್ಲಿ ನಡೆಯಿತು.
ಅಭಿನಂದನಾ ಭಾಷಣ ಮಾಡಿದ ನಿವೃತ್ತ ಹೈಸ್ಕೂಲ್ ಮುಖ್ಯ ಶಿಕ್ಷಕ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಮಾತನಾಡಿ ಚಿನ್ನಪ್ಪ ಗೌಡರು ಓರ್ವ ಶಿಕ್ಷಕ ವೃತ್ತಿಯನ್ನು
ಸಮರ್ಕವಾಗಿ ನಿಭಾಯಿಸಿದ ವ್ಯಕ್ತಿ.ಕ್ಲಿಷ್ಟಕರ ಸಂದರ್ಭದಲ್ಲಿಯೂ ಅವರು ಎದೆಗುಂದೆ ಸಮಸ್ಯೆಗಳನ್ನು ಎದುರಿಸಿದರು ಎಂದು ಹೇಳಿ ನಿವೃತ್ತ ಜೀವನಕೆ ಶುಭ ಹಾರೈಸಿದರು.
ಬಿ.ಇ.ಒ ವೈ .ಎಸ್ ಹರಗಿ ಮಾತನಾಡಿ ಚಿನ್ನಪ್ಪ ಗೌಡರು ಓರ್ವ ಶಿಕ್ಷಣನಾಗಿ ತನ್ನನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರೀತಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿನ್ನಪ್ಪ ಗೌಡರು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುವುದು ಶಿಕ್ಷಕಣ ಜವಾಬ್ದಾರಿ.ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಸೇರಿಕೊಂಡು ಕೆಲಸ ಮಾಡಿದ್ದಾಗ ಶಾಲೆ ಅಭಿವೃದ್ಧಿಯಾಗಲು ಸಾಧ್ಯ.ಜೀವನದಲ್ಲಿ ಸಂತೋಷ ಪಡೆಯಿರಿ.ನಾನು ತುಂಬಾ ಬಡತನದಲ್ಲಿ ವಿದ್ಯಾಬ್ಯಾಸ ಪಡೆದು ಹೋರಾಟದ ಮೂಲಕ ಶಿಕ್ಣಕನಾಗಿದ್ದೇನೆ.ಈಗೀನ ವಿದ್ಯಾರ್ಥಿಗಳಿಗೆ ಬಡತನದ ಆರಿವು ಆಗುವುದಿಲ್ಲ.ವಿದ್ಯಾಭ್ಯಾಸ ಪಡೆಯಲು ಸಾಕಾಷ್ಟು ಅವಕಾಶ ಇದ್ದು ಅವಕಾಶಗಳನ್ನು ಸಮರ್ಕವಾಗಿ ಉಪಯೋಗಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಮಾತನಾಡಿ ಚಿನ್ನಪ್ಪ ಗೌಡರು ಸಿ.ಸಿ.ಆರ್.ಟಿಯ ತರಬೇತಿ ಪಡೆದು ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯಕ್ಕೆ ಒತ್ತು ನೀಡಿದ್ದಾರೆ.ಕೆಲವರು ತರಬೇತಿ ಪಡೆದುಕೊಂಡು ಬಂದು ಸುಮ್ಮನೆ ಇರುತ್ತಾರೆ.ಆದರೆ ಇವರು ಹಾಗೆ ಮಾಡಿಲ್ಲ.ಅನೇಕ ಕಾರ್ಯಕ್ರಮಗಳನ್ನು ಸಿ.ಸಿ.ಆರ್.ಟಿಯ ಅಧ್ಯಕ್ಷನಾಗಿದ್ದುಕೊಂಡು ಸುಳ್ಯದಲ್ಲಿ ಮಾಡಿದ್ದಾರೆ.ಅಂತರ್ ರಾಜ್ಯಗಳಲ್ಲಿ ತನ್ನ ತಂಡದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಿದಾನಂದ ಕುದ್ಪಾಜೆ ಅಧ್ಯಕ್ಷತೆ ವಹಿಸಿದ್ದರು .
ಪ್ರೌಡಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ,ಜನಾರ್ದನ ಸರ್ಕಾರ್,ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅಶ್ವಿನಿ ಪ್ರೌಡ ಶಾಲಾ ವಿಭಾಗದ ಶಿಕ್ಷಕಿ ಜ್ಯೋತಿ ಲಕ್ಚ್ಮಿ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪರಮೇಶ್ವರಿ,ನಿವೃತ್ತ ಶಿಕ್ಷಕಿಯರಾದ ನಳಿನಿ,ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೇಕ ಅಭಿಮಾನಿಗಳು ವಿದ್ಯಾರ್ಥಿಗಳು ಶಿಕ್ಷಕರು ನೆನಪಿನ ಕಾಣಿಕೆ ನೀಡಿ ಶಿಕ್ಷಕ ಚಿನ್ನಪ್ಪ ಗೌಡರನ್ನು ಅಭಿನಂದಿಸಿದರು
ಚಿನ್ನಪ್ಪ ಗೌಡರ ಶಿಕ್ಷಕ ವೃತ್ತಿ ಇತರ ಶಿಕ್ಷಕರಿಗೆ ಮಾದರಿ : ವೈ.ಎಸ್ ಹರಗಿ





































































